Belagavi News In Kannada | News Belgaum

ಪ್ರಾ.ಬಿ.ಎಸ್.ಗವಿಮಠ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಿಗೆ ಬಹಿರಂಗ ನಿವೇದನೆ

🌐 Belgaum News :

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಿಗೆ ಬಹಿರಂಗ ನಿವೇದನೆ
ಮಾನ್ಯರೇ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿ ನೋಡಿದೆ.ಅತ್ಯಂತ ಪಾರದರ್ಶಕವಾಗಿ ಆಯ್ಕೆಸಮಿತಿ ಕೆಲಸ ಮಾಡಿದೆ ಎಂಬ ನಂಬಿಕೆ ಬಹುತೇಕ ಸಾಹಿತಿಗಳು-ಸಂಸ್ಕøತಿ ಚಿಂತಕರಿಗೆ ಬರುತ್ತಿಲ್ಲ. ನಿಮ್ಮ ಮಾನದಂಡಗಳೇ ಸಾರ್ವಜನಿಕರಿಗೆ ತಿಳಿಯಲಿಲ್ಲ.

ಸಾಕಷ್ಟು ಮುಂಚಿತವಾಗಿ ನಾನು ಪತ್ರಿಕಾ ಪ್ರಕಟಣೆಯ ಮೂಲಕ ಬೆಳಗಾವಿ ಜಿಲ್ಲೆಅತಿದೊಡ್ಡಜಿಲ್ಲೆ. ಕನಿಷ್ಠ ಮೂವರಿಗೆ ಪ್ರಶಸ್ತಿ ನೀಡಬೇಕೆಂದು ಕೇಳಿದ್ದೆ. ಹಾವೇರಿಜಿಲ್ಲೆಗೆ, ಧಾರವಾಡಜಿಲ್ಲೆಗೆ ಎಷ್ಟು ಕೊಟ್ಟಿದ್ದೀರಿ ? ಬೆಳಗಾವಿ ಜಿಲ್ಲೆಗೆಒಂದೇಏಕೆ ?

ಈ ಜಿಲ್ಲೆಯಲ್ಲಿ ಅರ್ಹ ವ್ಯಕ್ತಿಗಳೇ ಇಲ್ಲವೇ?ಜಿಲ್ಲಾಮಟ್ಟದಲ್ಲಿ  ರಾಜ್ಯೋತ್ಸವ ಪ್ರಶಸ್ತಿ ನೀಡಬಾರದೆಂದಿದೆ.ಆದರೆ ಬೆಳಗಾವಿ ಸಹಿತವಾಗಿ ಅನೇಕ ಜಿಲ್ಲೆಗಳಲ್ಲಿ ಸಚಿವರೇ ಪ್ರಶಸ್ತಿ ನೀಡಿದ್ದಾರೆ.ಯಾಕೆ ?

ನೋಡಿ ಸ್ವಾಮೀ ನಿಮ್ಮಚಿಂತನೆ ಪ್ರಾಮಾಣಿಕವೆನಿಸಿತ್ತು.ಆದರೆ ಈ ಎಡವಟ್ಟುಗಳು ಏಕೆ ?ಇನ್ನು ಮುಂದೆರಾಜ್ಯೋತ್ಸವ ಪ್ರಶಸ್ತಿಗಳನ್ನು ಯಾರಿಗೆ ನೀಡಬೇಕೆನ್ನುವಅಧಿಕಾರ ನಿಮ್ಮ ಇಲಾಖೆಯಲ್ಲಿ ಕೇಂದ್ರಿತವಾಗುವದು ಬೇಡ.ಆ ಅಧಿಕಾರವನ್ನು ಆಯಾ ಜಿಲ್ಲೆಯಜಿಲ್ಲಾಧಿಕಾರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಗಣ್ಯರಿಂದಕೂಡಿದಒಂದು ಸಮಿತಿ ನಿರ್ಧರಿಸಲಿ.

ಉತ್ತರಕರ್ನಾಟಕಕ್ಕೆ ವಿಶೇಷವಾಗಿ ಬೆಳಗಾವಿ ಜಿಲ್ಲೆಗೆಅನ್ಯಾಯವಾಗಿದೆ.ಇದು ನನ್ನಅಭಿಪ್ರಾಯವಲ್ಲ. ಬೆಳಗಾವಿ ಜಿಲ್ಲೆಯ ಸಾರಸ್ವತ ಲೋಕದವರೆಲ್ಲರ ಅಭಿಪ್ರಾಯ.ಅದೇರೀತಿರಂಗಾಯಣ ಮತ್ತು ಟ್ರಸ್ಟ್‍ಗಳಲ್ಲಿಯೂ ರಾಜಕೀಯಕಾರ್ಯಕರ್ತರನ್ನೇ  ತುಂಬುತ್ತಿದ್ದೀರಿ.ನಮ್ಮಅಭಿಪ್ರಾಯ ತಿಳಿದುಕೊಳ್ಳುವ ತಾಳ್ಮೆ ಇರಲಿ.
ಪ್ರಾ.ಬಿ.ಎಸ್.ಗವಿಮಠ
ಬೆಳಗಾವಿ

📱 Read Top News, Belgaum News Updates, Belagavi News in Kannada, Latest News on News Belgaum