Belagavi News In Kannada | News Belgaum

ಬ್ರೀಡ್ಜ್ ಕಂ ಬ್ಯಾರೇಜಗಳಿಗೆ ಹಾಕುವ ಕಬ್ಬಿಣದ ಪ್ಲೇಟ್‍ಗಳನ್ನು ಕಳ್ಳತನ ಮಾಡುವ ಆರೋಪಿಗಳ ಬಂಧನ

🌐 Belgaum News :

ಸಂಕೇಶ್ವರ ಪೊಲೀಸ ಠಾಣೆ ಹದ್ದಿ ಮತ್ತು ಯಮಕನಮರಡಿ ಪೊಲೀಸ್ ಠಾಣೆ ಹದ್ದಿಗಳಲ್ಲಿ ಬ್ರೀಡ್ಜ್ ಕಂ
ಬ್ಯಾರೇಜಗಳಿಗೆ ಹಾಕಲಾಗುತ್ತಿದ್ದ ಕಬ್ಬಿಣದ ಪ್ಲೇಟ್‍ಗಳು ಕಳ್ಳತನವಾದ ಬಗ್ಗೆ 03 ಪ್ರಕರಣಗಳು
ದಾಖಲಾಗಿದ್ದು, ಸದರಿ ಆರೋಪಿತರಿಗೆ ತಪಾಸ ಮಾಡಲು ಮಾನ್ಯ ಶ್ರೀ ಲಕ್ಷ್ಮಣ ನಿಂಬರಗಿ, ಐಪಿಎಸ್,
ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಶ್ರೀ ಅಮರನಾಥ ರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು
ಬೆಳಗಾವಿ ಜಿಲ್ಲೆ ಹಾಗೂ ಶ್ರೀ ಮನೋಜಕುಮಾರ ನಾಯಿಕ, ಡಿ.ಎಸ್.ಪಿ ಗೋಕಾಕ ರವರ
ಮಾರ್ಗದರ್ಶನದಲ್ಲಿ ಹುಕ್ಕೇರಿ ಸಿಪಿಐ ರವರಾಧ ಶ್ರೀ ರಮೇಶ ಛಾಯಾಗೋಳ ರವರು ನೇತೃತ್ವದಲ್ಲಿ
ತಂಡವನ್ನು ರಚನೆ ಮಾಡಿದ್ದು, ದಿನಾಂಕ: 03/11/2021 ರಂದು 0530 ಗಂಟೆಗೆ ಆರೋಫಿತರಾದ
1) ಸತೀಶ ಗುಲಾಬ ಗೋಸಾವಿ ವಯಾ: 22 ವರ್ಷ ಸಾ: ಬೆಡಕಿಹಾಳ ತಾ|| ನಿಪ್ಪಾಣಿ,
2) ಉಮೇಶ ಭರತ ಗೋಸಾವಿ ವಯಾ: 23 ವರ್ಷ
3) ಅಕ್ಷಯ ನೇತಾಜಿ ಗೋಸಾವಿ ವಯಾ: 24 ವರ್ಷ,
4) ಆಕಾಶ ವಿಲಾಸ ಗೋಸಾವಿ ವಯಾ: 20 ವರ್ಷ
5) ಬಲಬೀರಸಿಂಗ್ ಬಲಜೀತಸಿಂಗ್ ಟಾಕ್ ವಯಾ: 29 ವರ್ಷ ಸಾ: ಎಲ್ಲರೂ ನಿಪ್ಪಾಣಿ ಆಶ್ರಯ
ನಗರ
ಇವರು ತಾವು ಕಳ್ಳತನ ಮಾಡಿದ ಮಾಲನ್ನು ಎರಡು ಬುಲೆರೋ ವಾಹನಗಳಲ್ಲಿ ನಿಪ್ಪಾಣಿ
ಕಡೆಯಿಂದ ಗಡಹಿಂಗ್ಲಜ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಆರೋಫಿತರಿಗೆ ದಾಳಿ ಮಾಡಿ ಆರೋಫಿತರ
ಕಡೆಯಿಂದ ಒಟ್ಟು 40 ಕಬ್ಬಿಣದ ಪ್ಲೆಟ್‍ಗಳನ್ನು ಹಾಗೂ ಎರಡು ಬುಲೆರೊ ವಾಹನಗಳು ಹೀಗೆ ಒಟ್ಟು
1274,000/-ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿರುತ್ತಾರೆ. ಮತ್ತು ಇದರಿಂದ
ಸಂಕೇಶ್ವರ ಪೊಲೀಸ ಠಾಣೆಯ ಎರಡು ಪ್ರಕರಣ ಮತ್ತು ಯಮಕನಮರಡಿ ಪೊಲೀಸ ಠಾಣೆಯ
ಒಂದು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶ್ವಸಿಯಾಗಿರುತ್ತಾರೆ.
ಈ ಪ್ರಕರಣಗಳನ್ನು ಬೇಧಿಸುವಲ್ಲಿ ಶ್ರೀ ರಮೇಶ ಛಾಯಾಗೋಳ ಸಿಪಿಐ ಹುಕ್ಕೇರಿ, ಶ್ರೀ ಜಿ. ಬಿ.
ಕೊಂಗನ್ನೊಳ್ಳಿ, ಪಿ.ಎಸ್.ಐ (ಕಾ&ಸು), ಶ್ರೀ ಜೆ ಎ ಕೆಳಗಡೆ ಪಿ.ಎಸ್.ಐ (ಅಪರಾಧ ವಿಭಾಗ) ಸಂಕೇಶ್ವರ
ಪೊಲೀಸ್ ಠಾಣೆ ಮತ್ತು ಸಂಕೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಮಹೇಶ ಕರಗುಪ್ಪಿ, ಬಿ.
ಎಸ್. ಕಪರಟ್ಟಿ, ಎಸ್. ವ್ಹಿ. ಕಮಕೇರಿ, ಎಮ್. ಎಮ್. ಜಂಬಗಿ, ವಾಯ್. ಎಚ್. ನದಾಫ, ಎಲ್.
ಎಸ್. ಕೋಚರಿ, ಎಮ್. ಐ. ಚೀಪಲಕಟ್ಟಿ ಮತ್ತು ಯಮಕನಮರಡಿ ಪೊಲೀಸ್ ಠಾಣೆಯ ಶ್ರೀ ಬಿ ವ್ಹಿ
ನ್ಯಾಮಗೌಡ ಪಿ.ಎಸ್.ಐ ಮತ್ತು ಸಿಬ್ಬಂದಿ ಜನರಾದ ಎಸ್. ಎ. ಶೇಖ, ಎಸ್. ಬಿ. ಪೂಜೇರಿ, ಜೆ. ಐ.
ಹುಬ್ಬಳ್ಳಿ, ಎಸ್. ಎಮ್. ಚೌಗಲಾ, ಶೀವಲಿಂಗಪ್ಪಾ ಆರ್ ಕೆ ಮತ್ತು ತನಿಖಾ ವಿಭಾಗದ ಸಿಬ್ಬಂದಿ ಬಿ. ಟಿ.
ಪಾಟೀಲ, ಎಮ್. ಜಿ. ದಾದಾಮಲೀಕ ಹಾಗೂ ಜಿಲ್ಲಾ ಟೆಕ್ನಿಕಲ್ ವಿಭಾಗದ ಸಿಬ್ಬಂದಿ ಸಚ್ಚೀನ ಪಾಟೀಲ
ಮತ್ತು ಹುಕ್ಕೇರಿ ಸಿಪಿಐ ಕಾರ್ಯಾಲಯದ ಬಿ ವ್ಹಿ ನೇರ್ಲಿ ಇವರು ಪಾಲ್ಗೊಂಡಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum