Belagavi News In Kannada | News Belgaum

ಪೊಲೀಸ್ ಕಾನ್ ಸ್ಟೇಬಲ್ ಕಪಾಳಕ್ಕೆ ಹೊಡೆದ ಬಿಜೆಪಿ ಮಾಜಿ ಶಾಸಕ

🌐 Belgaum News :

ರಾಯಚೂರು : ಪ್ರತಿಭಟನೆ ವೇಳೆ ಮಾಜಿ ಶಾಸಕ ಎ.ಪಾಪ್ಪಾರೆಡ್ಡಿ ಅವರು ಪೊಲೀಸ್ ಕಾನ್ ಸ್ಟೆಬಲ್ ಕಪಾಳಕ್ಕೆ ಹೊಡೆದ ಪ್ರಸಂಗ ನಡೆದಿದ್ದು, ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಇದೇ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ಕೂಡ ನಡೆಯಿತು.

ಬೆಂಕಿ ಹಚ್ಚಿದ ಪ್ರತಿಕೃತಿ ಎತ್ತಿಕೊಂಡ ಹೋಗಲು ಪೊಲೀಸರು ಮುಂದಾದರು. ಇದರಿಂದ ಕೋಪಗೊಂಡ ಮಾಜಿ ಶಾಸಕ ಪೊಲೀಸ್ ಪೇದೆಯ ಕಪಾಳಕ್ಕೆ ಹೊಡೆದಿದ್ದಾರೆ.  ಪೇದೆಯನ್ನು ಅವಾಚ್ಯ ಶಬ್ದಗಳಿಂದ ಮಾಜಿ ಶಾಸಕ‌ ಪಾಪಾರಡ್ಡಿ ನಿಂದಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಹೊಟ್ಟೆಪಾಡಿಗೆ ದಲಿತರು ನಾಯಕರು ಬಿಜೆಪಿಯಲ್ಲಿ ಇದ್ದಾರೆ’ ಎಂದು ವಿಪಕ್ಷ ಸಿದ್ದರಾಮಯ್ಯ ಹೇಳಿದ್ದಾರೆ ಅನ್ನೋ ಆರೋಪ ಕೇಳಿಬಂದಿರುವ ಹಿನ್ನೆಲೆ ಬಿಜೆಪಿ ನಾಯಕರು, ಮುಖಂಡರು ಪತ್ರಿಭಟನೆ ನಡೆಸಿದರು./////

📱 Read Top News, Belgaum News Updates, Belagavi News in Kannada, Latest News on News Belgaum