Belagavi News In Kannada | News Belgaum

ಪುನೀತ್ ಸಮಾಧಿ ದರ್ಶನ ಪಡೆಯಲು ಎತ್ತಿನ ಬಂಡಿಯಲ್ಲಿ 180 ಕಿ.ಮೀ ದೂರದಿಂದ ಬಂದ ಅಭಿಮಾನಿಗಳು

🌐 Belgaum News :

ಬೆಂಗಳೂರು : ದಿವಂಗತ ಪವರ ಸ್ಟಾರ್, ನಟ ಪುನೀತ್ ರಾಜ್​ಕುಮಾರ್ ಸಮಾಧಿ ದರ್ಶನ ಪಡೆಯಲು ಅಪ್ಪುವಿನ ಅಪ್ಪಟ ಅಭಿಮಾನಿಗಳು ಬರೋಬ್ಬರಿ ಎತ್ತಿನ ಬಂಡಿಯಲ್ಲಿ 180ಕಿಲೋ ಮೀಟರ್ ಪ್ರಯಾಣಿಸಿ ಬಂದಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡದಿಂದ ಬಂದ ಅಭಿಮಾನಿಗಳು ಬರೋಬ್ಬರಿ 180 ಕಿಲೋ ಮೀಟರನ್ನು ಎತ್ತಿನ ಬಂಡಿಯಲ್ಲಿ ಕ್ರಮಿಸಿ ಬೆರಗು ಮೂಡಿಸಿದ್ದಾರೆ. ನಿನ್ನೆಯಿಂದ ಉಪವಾಸ  ಇದ್ದ ಐದು ಜನ ಅಭಿಮಾನಿಗಳು ನಿನ್ನೆ ಹೊರಟು ಇಂದು ಬೆಳಗ್ಗೆ ಕಂಠೀರ ಸ್ಟೂಡಿಯೋ ತಲುಪಿದ್ದಾರೆ.

ಅಪ್ಪು ಅವರನ್ನು ಕಳೆದುಕೊಂಡು ತುಂಬಾ ನೋವಾಗಿದೆ ಎಂದು ಕಣ್ಣಿರು ಸುರಿಸುತ್ತಿರುವ ಅಭಿಮಾನಿಗಳು ಶಿವಣ್ಣ ಬಂದು ನಮ್ಮನ್ನ ಭೇಟಿ ಮಾಡುವ ತನಕ ಇಲ್ಲಿಂದ ನಾವು ವಾಪಸ್ ತೆರಳಲ್ಲ ಎಂದು ಹಠ ಹಿಡಿದಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum