Belagavi News In Kannada | News Belgaum

ಮಗ-ಸೊಸೆ ಜಗಳ ಬಿಡಿಸಲು ಹೋದ ತಂದೆಯನ್ನೇ ಕೊಂದ ಮಗ

🌐 Belgaum News :

ಬೆಳಗಾವಿ : ಮಗ- ಸೊಸೆ ಜಗಳ ಬಿಡಿಸಲು ಹೋದ ಅಪ್ಪನನ್ನೇ ಮಗ ಕುಡುಗೋಲಿನಿಂದ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೇಡರಹಟ್ಟಿಯಲ್ಲಿ ನಡೆದಿದೆ.

ಕಲ್ಲಪ್ಪ ಪೂಜಾರಿ(51) ಕೊಲೆಯಾದ ತಂದೆ. ಯಲ್ಲಪ್ಪ ಕೋಡೆನ್ನವರ್(35) ಕೊಲೆ ಮಾಡಿದ ಮಗನಾಗಿದ್ದಾನೆ.

ಯಲ್ಲಪ್ಪ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನು. ಇದನ್ನು ನೋಡಲಾಗದೆ ತಂದೆ ಬಿಡಿಸಲು ಹೋಗಿದ್ದಾನೆ. ಮಗ- ಸೊಸೆ ನಡುವಿನ ಜಗಳ ಕಲ್ಲಪ್ಪನ ಕೊಲೆಯಲ್ಲಿ ಅಂತ್ಯವಾಗಿದೆ.

ಮೃತ ಕಲ್ಲಪ್ಪ ಪೂಜಾರಿ ಎರಡು ಮದುವೆಯಾಗಿದ್ದು 2ನೇ ಹೆಂಡತಿಯ ಪುತ್ರ ಯಲ್ಲಪ್ಪನಿಂದ ತಂದೆ ಕಲ್ಲಪ್ಪ ಕೊಲೆ ನಡೆದಿದೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum