Belagavi News In Kannada | News Belgaum

68 ಹಳ್ಳಿಗಳಲ್ಲಿ ಪ್ರಾರಂಭವಾದ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ : ಸತೀಶ್ ಜಾರಕಿಹೊಳಿ

🌐 Belgaum News :

ಹುಕ್ಕೇರಿ : ತಾಲ್ಲೂಕಿನ ಯಮಕನಮರಡಿ ವಿಧಾನಸಭಾ ಮತಕೇತ್ರದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ  ಶಾಸಕ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿತು.

ಸಭೆ ಪ್ರಾರಂಭದಲ್ಲಿ ಹಿಡಕಲ್ ಜಲಾಶಯದ ದಡದಲ್ಲಿ ಬರುವ  ಜಿನರಾಳ  ಗ್ರಾಮಸ್ಥರು  ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಆ ಜಾಗ ಖಾಲಿ ಮಾಡುವಂತೆ ನೀರಾವರಿ ಇಲಾಖೆಯವರು ನೋಟಿಸ್ ನೀಡಿದೆ. ಈಗ ಎಲ್ಲಿಗೆ ಹೋಗಬೇಕೆಂದು ತಿಳಿಯದಾಗಿದೆ ಎಂದು ಮುಖಂಡರು ಶಾಸಕರ ಎದುರು ಹೇಳಿಕೊಂಡರು. ಬಳಿಕ ಅಧಿಕಾರಿಗೊಂದಿಗೆ ಶಾಸಕರು ಚರ್ಚಿಸಿದರು.

ಜಲಜೀವನ ಯೋಜನೆಯಡಿ 68 ಹಳ್ಳಿಗಳಲ್ಲಿ ಪ್ರಾರಂಭಗೊಂಡಿರುವ ಕಾಮಗಾರಿಗಳ್ಳನ್ನು ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಂಡು ಶೀಘ್ರದಲ್ಲೇ ಮುಗಿಸುವಂತೆ ತಿಳಿಸಿದರು. ಬಸ್ಸಾಪುರ, ಅರ್ಜುನವಾಡ. ಕುರಣಿ. ಹಂಚಿನಾಳ  ಶಾಲೆಗಳ ದುರಸ್ತಿ ಹಾಗೂ  ದುಸ್ಥಿತಿಯಲ್ಲಿರುವ  68 ಶಾಲೆಗಳ  ಮರು ನಿರ್ಮಾಣ ಮಾಡಲು ಆಧಿಕಾರಿಗಳಿಗೆ ಸೂಚಿಸಿದರು.

18 ಅಂಗನವಾಡಿ ಕಟ್ಟಡಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲು ಸೂಚಿಸಿದರು. ಅರಣ್ಯ ಇಲಾಖೆ. ವಿದ್ಯುತ್ ಸಂಘದ  ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಿ  ಅಧಿಕಾರಿಗಳಗೆ ಸೂಚಿಸಿದರು. ಆರೋಗ್ಯ ಇಲಾಖೆ, ತೋಟಗಾರಿಕೆ, ಜಿ.ಪಂ .ಲೋಕೋಪಯೋಗಿ,  ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಹಶೀಲ್ದಾರ್ ಡಾ. ಡಿ ಎಚ್ ಹೂಗಾರ, ಇಓ ಉಮೇಶ ಸಿದ್ನಾಳ, ಹುಕ್ಕೇರಿ ಕ್ಷೇತ್ರ ಶಿಕ್ಷಣ ಅಧಿಕಾರಿ ದಂಡಿನ, ಮಾಹಾಂತೇಶ ಮಗದುಮ್ಮ, ತಾಲ್ಲೂಕು ವೈದ್ಯಾಧಿಕಾರಿ ಡಾ. ಕುಡಚಿ ಸೇರಿದಂತೆ ಇತರರು ಇದ್ದರು.//////

📱 Read Top News, Belgaum News Updates, Belagavi News in Kannada, Latest News on News Belgaum