Belagavi News In Kannada | News Belgaum

20 ಕುರಿಗಳ ಮಾರಣಹೋಮ : ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

🌐 Belgaum News :

ಬೆಳಗಾವಿ: 20ಕುರಿಗಳ ಮಾರಣಹೋಮದಿಂದ ಸಾಕಷ್ಟು ಸಂಕಟವಾಗಿದೆ. ದುಡಿದು ತಿನ್ನುವ ಬಡಪಾಯಿ ಮೇಲೆ ಕ್ರೂರಿ ಟಿಪ್ಪರ್ ಚಾಲಕ ಅಟ್ಟಹಾಸ ಮೆರೆದಿದ್ದಾನೆ.  ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ತಮಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ  ಕುರಿಯ ಮಾಲೀಕ   ಗುರುವಾರ ಜಿಲ್ಲಾಡಳಿತಕ್ಕೆ  ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ,  ಟಿಪ್ಪರ್ ಚಾಲಕ ನಿರ್ಲಕ್ಷ್ಯದಿಂದ ಬದುಕು ನಲುಗಿ ಹೋಗಿದ್ದೆನೆ. ರಸ್ತೆ ದಾಡುವಾಗ 20ಕುರಿಗಳು ಅಸುನಿಗಿವೆ. ಅದೃಷ್ಟವಶಾತ್ ನಾನು ಪ್ರಾಣಾಪಾಯದಿಂದ ಪಾರಾಗಿದ್ದು ಹೆಚ್ಚು ಆದರೆ, ನನ್ನ ಕುರಿಗಳನ್ನು ಕಿಡಿಗೇಡಿ ಚಾಲಕ ಬಲಿ ಪಡೆದುಕೊಂಡಿದ್ದಾನೆ. 10 ಕುರಿಗಳಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ಕಡೋಲಿಯ ಕುರಿಗಾಯಿ ಬೀರಪ್ಪ ಭರಮಪ್ಪಾ ಶಾಪೂರಕರ ಕಳವಳ ವ್ಯಕ್ತಪಡಿಸಿದರು.

ಸರಕಾರ ಘೋಷಿಸಿದ ಒಂದು ಕುರಿಗೆ 5 ಸಾವಿರ ಪರಿಹಾರ ಸಾಲದು.  ಹಾಗಾಗಿ ಒಂದು ಕುರಿಗೆ ಸುಮಾರು 15 ಸಾವಿರ ರೂಪಾಯಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಕುರಿಗಳ ಮೃತ್ಯುವಿಗೆ ಕಾರಣವಾದ ಟಿಪ್ಪರ್ ಮಾಲೀಕನಿಂದ ತಮಗೆ ನಷ್ಟ ತುಂಬಿಕೊಡಿಸಬೇಕೆಂದು  ಎಂದರು.

ಇತ್ತೀಚೆಗೆ ಟಿಪ್ಪರ್ ಚಾಲಕಲರ ವರ್ತನೆ ಮಿತಿಮೀರಿದೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಅವರನ್ನು ಕರೆಸಿ ತಾಕೀತು ಮಾಡಬೇಕು.  ಕುರಿಗಳ ಮೇಲೆ ಅವಲಂಭಿತಾಗಿರುವ ನಮ್ಮ ಜೀವನ ಬೀದಿಪಾಲಾಗಿದೆ. ಸರ್ಕಾರ ಸೂಕ್ತ  ಪರಿಹಾರ ನೀಡಬೇಕೆಂದು ಮನವಿ ಮೂಲಕ ಕೇಳಿಕೊಂಡರು.////

📱 Read Top News, Belgaum News Updates, Belagavi News in Kannada, Latest News on News Belgaum