Belagavi News In Kannada | News Belgaum

ಫೀಡೆ ಚೇಸ್ ಟೂರ್ನಿಯಲ್ಲಿ ಶಶಿಕಿರಣ್ ಮೆಲುಗೈ

🌐 Belgaum News :

ರಿಗಾ:  ಫೀಡೆ ಗ್ರಾಂಡ್ ಸ್ವಿಸ್ ಚೇಸ್ ಚಾಂಪಿಯನ್‍ಶೀಪ್‍ನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಕೆ.ಶಶಿಕಿರಣ್ ಅವರು ರಷ್ಯಾ ಗ್ರಾಂಡ್ ಮಾಸ್ಟರ್ ಅಲೆಕ್ಸಾಂಡರ್ ಪ್ರೆಡ್ಕೆ ಅವರನ್ನು ಮಣಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ರಷ್ಯಾದ ಉದಯೊನ್ಮುಖ ಆಟಗಾರನನ್ನು 53 ನಡೆಗಳ ನಂತರ ಪರಾಭವಗೊಳಿಸುವಲ್ಲಿ ಯಶಸ್ವಿಯಾದ ಶಶಿಕಿರಣ್ ಅವರು ಈಗಾಗಲೇ ಗೆಲವು ಸಾಧಿಸಿ ಮುನ್ನಡೆ ಕಾಯ್ದುಕೊಂಡಿರುವ ಪ್ರಮುಖ ಐದು ಆಟಗಾರರಲ್ಲಿ ಒಬ್ಬರಾಗಿ ಹೊರ ಹೊಮ್ಮಿದ್ದಾರೆ.

ಅಲಿರೇಜಾ ಫೀರೋಜಾ, ಅಲೆಕ್ಸಿ ಶೆರೋವ್, ಎವಿಗಿನಿ ನಜೇರ್ ಮತ್ತು ಮಾಕ್ಸಿಮೆ ವಚೇರ್‍ಲಾಗ್ರೇವ್ ಅವರೊಂದಿಗೆ ಶಶಿಕಿರಣ್ ಅವರು 4.5 ಪಾಯಿಂಟ್‍ಗಳನ್ನು ಪಡೆದುಕೊಂಡಿದ್ದು, 7 ನೆ ಸುತ್ತಿನಲ್ಲಿ ಅವರು ವಚೇರ್‍ಲಾಗ್ರೇವ್ ಅವರನ್ನು ಎದುರಿಸಲಿದ್ದಾರೆ.
ಮಹಿಳಾ ವಿಭಾಗದಲ್ಲಿ ಡಿ. ಹರಿಕಾ ಅವರು ಜಾರ್ಜಿಯಾದ ಬಸ್ತಿಯಾಸ್ವಿಲಿ ಅವರೊಂದಿಗೆ ಡ್ರಾ ಮಾಡಿಕೊಳ್ಳುವ ಮೂಲಕ ನಾಲ್ಕು ಅಂಕ ಪಡೆದುಕೊಂಡು ಇತರ ಆರು ಮಂದಿಯೊಂದಿಗೆ ಜಂಟಿ ಮೂರನೆ ಸ್ಥಾನದಲ್ಲಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum