Belagavi News In Kannada | News Belgaum

ಬೆಳ್ಳಂಬೆಳಗ್ಗೆ ಜಿಮ್ ಗೆ ಹೋರಟಿದ್ದ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ

🌐 Belgaum News :

ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಯುವಕನ ಬರ್ಬರ ಕೊಲೆ ನಡೆದಿದೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ನಗರದ ವಿದ್ಯಾ ನಗರದ ನಿವಾಸಿ  ಅಭಿಷೇಕ್(25) ಕೊಲೆಯಾದ ಯುವಕ. ಅಭಿಷೇಕ್ ತಂದೆ ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್  ಆಗಿ ಕೆಲಸ ಮಾಡುತ್ತಾರೆ. ಕೊಲೆಯಾದ ಅಭಿಷೇಕ್ ಕೂಡಾ ರೌಡಿ ಸೀಟರ್. ಕಲಬುರಗಿ ನಗರದ ಅಶೋಕ ನಗರ ಸೇರಿದಂತೆ ಅನೇಕ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಕೇಸ್​ಗಳು ಅಭಿಷೇಕ್​ ಮೇಲಿದೆ.

2020 ರಲ್ಲಿ ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಸಾಗರ್ ಅನ್ನೋ ಯುವಕನ ಮೇಲೆ ಅಭಿಷೇಕ್ ಮತ್ತು ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಇಂದು ಅದೇ ಸಾಗರ್ ಮತ್ತು ಆತನ ಗ್ಯಾಂಗ್ ನಿಂದ ಬರ್ಬರ ಕೊಲೆ ನಡೆದಿದೆ.

ಕೊಲೆಯಾದ ಅಭಿಷೇಕ್ ಮುಂಜಾನೆ ಜಿಮ್​ಗೆ ಹೋಗಲು ಮನೆಯಿಂದ ಹೊರ ಬಂದಿದ್ದ. ಮೊದಲು ಪಲ್ಸರ್ ಬೈಕ್ ನಿಂದ ಡಿಕ್ಕಿ ಹೊಡೆಸಿ ಬಳಿಕ ಅಟ್ಟಾಡಿಸಿಕೊಂಡು ಸಾಗರ್ ಮತ್ತು ಗ್ಯಾಂಗ್ ಅಭಿಷೇಕ್​ನನ್ನು ಕೊಲೆ ಮಾಡಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum