Belagavi News In Kannada | News Belgaum

ಟಿಸಿಎಸ್‍ನ ಗ್ರಾಮೀಣ ಐಟಿ ರಸಪ್ರಶ್ನೆ ಕರ್ನಾಟಕ ರಾಜ್ಯ ಫೈನಲ್ಸ್ ಗೆದ್ದ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ

🌐 Belgaum News :

 

ಹುಬ್ಬಳ್ಳಿ :ಗ್ರಾಮೀಣ ಐಟಿ ರಸಪ್ರಶ್ನೆ-2021ರ ಕರ್ನಾಟಕ ರಾಜ್ಯ ಫೈನಲ್ಸ್‍ನಲ್ಲಿ ಶಿರಸಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಶಸ್ತಿ ಗೆದ್ದಿದ್ದಾರೆ ಎಂದು ಪ್ರಮುಖ ಜಾಗತಿಕ ಐಟಿ ಸೇವೆಗಳು, ಸಲಹಾ ಮತ್ತು ವ್ಯಾಪಾರ ಪರಿಹಾರಗಳ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) (ಬಿಎಸ್‍ಇ: 532540, ಎನ್‍ಎಸ್‍ಇ: ಟಿಸಿಎಸ್) ಘೋಷಿಸಿದೆ.

22 ನೇ ಆವೃತ್ತಿಯ ರಸಪ್ರಶ್ನೆಯನ್ನು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ನಡೆಸಲಾಯಿತು. ಕರ್ನಾಟಕ ಸರ್ಕಾರದ ಡಿಡಿಪಿಐ ಮತ್ತು ಡಿಡಿಪಿಯು ಈ ಸ್ಪರ್ಧೆಗೆ ಅಗತ್ಯ ನೆರವು ನೀಡಿತ್ತು.

ಈ ವರ್ಷ, ತೊಡಗಿಸಿಕೊಳ್ಳುಕೆಯ ವರ್ಚುವಲ್ ಸ್ವರೂಪದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಅವಕಾಶವ ಪಡೆದರು. ಆನ್‍ಲೈನ್ ಪರೀಕ್ಷೆಗಳು ಮತ್ತು ವರ್ಚುವಲ್‍ರಸಪ್ರಶ್ನೆ ಕಾರ್ಯಕ್ರಮಗಳ ಸಂಯೋಜನೆಯಾಗಿದ್ದ ಈ ಕಾರ್ಯಕ್ರಮ ಅವರಿಗೆ ಸಂಪೂರ್ಣವಾಗಿ ಹೊಸ ಡಿಜಿಟಲ್ ಅನುಭವವನ್ನು ನೀಡಿತು.
ಹಲವಾರು ಜಿಲ್ಲೆಗಳಿಂದ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು, 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೂರ್ವಭಾವಿ ಆನ್‍ಲೈನ್ ಪರೀಕ್ಷೆಯ ನಂತರ, ಆರು ವಿದ್ಯಾರ್ಥಿಗಳು ವರ್ಚುವಲ್ ಫೈನಲ್‍ಗೆ ಅರ್ಹತೆ ಪಡೆದರು. ಫೈನಲ್ಸ್ ಐದು ವಿಭಾಗಗಳನ್ನು ಹೊಂದಿತ್ತು. ಅವುಗಳೆಂದರೆ ಬೈಟ್‍ಕ್ಲೌಡ್ಸ್, ಬೈಟ್ ರೆಕಗ್ನಿಷನ್, ಬೈಟ್‍ಕಾಂಟೆಕ್ಸ್ಟ್, ಬಾರ್ಡರ್‍ಲೆಸ್ ಬೈಟ್‍ಗಳು, ಬೈಟ್ಸ್ ಅಗೈಲ್. ಇದು ಐಟಿ ಡೊಮೇನ್‍ನಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಿತು.

ರಾಜ್ಯ ಫೈನಲ್‍ನ ಫಲಿತಾಂಶ :ಶಿರಸಿ ಲಯನ್ಸ್‍ಆಂಗ್ಲ ಮಾಧ್ಯಮ ಶಾಲೆ ಜಯಂತ್ ಹೆಗ್ಡೆ

ವಿಜೇತರು: ರನ್ನರ್‍ಅಪ್: ಜಯಂತ್ ಎಂ, ಎಸ್.ಟಿ.ಜಿ. ಪಬ್ಲಿಕ್ ಸ್ಕೂಲ್, ಪಾಂಡವಪುರ ಮಂಡ್ಯ

ಟಿಸಿಎಸ್ ವಿಜೇತರಿಗೆರೂ 10,000 ಮೌಲ್ಯದಉಡುಗೊರೆ ವೋಚರ್‍ಗಳನ್ನು ಮತ್ತುರೂ 7,000 ಮೌಲ್ಯದರನ್ನರ್‍ಅಪ್ ವೋಚರ್‍ಗಳನ್ನು ನೀಡಿದೆ.

ಟಿಸಿಎಸ್ ಕರ್ನಾಟಕ ಸರ್ಕಾರದಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತುತಂತ್ರಜ್ಞಾನಇಲಾಖೆಯ ಸಹಯೋಗದೊಂದಿಗೆ 2000ನೇ ಇಸವಿಯಿಂದಗ್ರಾಮೀಣ ಐಟಿ ರಸಪ್ರಶ್ನೆಯನ್ನುಆಯೋಜಿಸುತ್ತಿದೆ, ಭಾರತದಲ್ಲಿ ಭಾಗವಹಿಸುವ ರಾಜ್ಯಗಳಾದ್ಯಂತ ಸಣ್ಣ ಪಟ್ಟಣಗಳು ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳಲ್ಲಿ ಐಟಿ ಅರಿವನ್ನು ಹೆಚ್ಚಿಸಲು ಮತ್ತುತಂತ್ರಜ್ಞಾನದ ಪ್ರಪಂಚದಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅರಿವು ಹೊಂದಲುಇದು ನೆರವಾಗುತ್ತಿದೆ. ಈ ಕಾರ್ಯಕ್ರಮವುಇಲ್ಲಿಯವರೆಗೆ 18 ದಶಲಕ್ಷ ವಿದ್ಯಾರ್ಥಿಗಳನ್ನು ತಲುಪಿದೆ.
2021 ರರಸಪ್ರಶ್ನೆಆವೃತ್ತಿಯುಗುಜರಾತ್, ಮಹಾರಾಷ್ಟ್ರ, ಛತ್ತೀಸ್‍ಗಢ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತುಕರ್ನಾಟಕದಾದ್ಯಂತಎಂಟು ಪ್ರಾದೇಶಿಕ ಸುತ್ತುಗಳನ್ನು ಒಳಗೊಂಡಿದೆ. ಪ್ರಾದೇಶಿಕ ಸುತ್ತುಗಳಿಂದ ವಿಜೇತರು ನವೆಂಬರ್‍ನಲ್ಲಿ ನಡೆಯುವರಾಷ್ಟ್ರೀಯ ಫೈನಲ್‍ನಲ್ಲಿ ಸ್ಪರ್ಧಿಸುತ್ತಾರೆ. ರಾಷ್ಟ್ರಮಟ್ಟದ ಬಹುಮಾನಗಳಲ್ಲಿ ವಿಜೇತರಿಗೆರೂ 1,00,000 ಮತ್ತುರನ್ನರ್‍ಅಪ್‍ಗೆರೂ 50,000 ಟಿಸಿಎಸ್ ಶೈಕ್ಷಣಿಕ ವಿದ್ಯಾರ್ಥಿವೇತನಗಳು ಲಭ್ಯವಾಗುತ್ತವೆ.

📱 Read Top News, Belgaum News Updates, Belagavi News in Kannada, Latest News on News Belgaum