Belagavi News In Kannada | News Belgaum

ಆಯಕಟ್ಟಿನ ಸ್ಥಳಗಳಲ್ಲಿ ಪುನೀತರಾಜಕುಮಾರ ಭಾವಚಿತ್ರವಿರುವ ಫಲಕಗಳನ್ನು ಹಾಕಿ ಭಾವಪೂರ್ಣ ಶೃದ್ಧಾಂಜಲಿ

🌐 Belgaum News :

ಶೇಡಬಾಳ : ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಪವರ್‍ಸ್ಟಾರ್ ಎಂದೇ ಖ್ಯಾತರಾದ ಪುನೀತ್‍ರಾಜಕುಮಾರ ಅವರ ಆಕಸ್ಮಿಕ ನಿಧನದಿಂದ ಕರ್ನಾಟಕ ಚಿತ್ರರಂಗಕ್ಕೆ, ಅವರ ಅಭಿಮಾನಿಗಳಿಗೆ ತುಂಬಲಾರದ ಹಾನಿಯುಂಟಾಗಿದೆ.

ಅವರ ಅಂತಿಮ ದರ್ಶನವನ್ನು ಲಕ್ಷಾಂತರ ಜನರು ಪಡೆದುಕೊಂಡು ಅಂತಿಮ ಗೌರವ ವಂದನೆ ಸಲ್ಲಿಸಿದರು. ಅದರಂತೆ ಕರ್ನಾಟಕದಾದ್ಯಂತ ಅವರ ಅಭಿಮಾನಿ ಬಳಗದವರು ಆಯಕಟ್ಟಿನ ಸ್ಥಳಗಳಲ್ಲಿ ಪುನೀತರಾಜಕುಮಾರ ಭಾವಚಿತ್ರವಿರುವ ಫಲಕಗಳನ್ನು ಹಾಕಿ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿರುವುದನ್ನು ನಾವು ಕೇಳಿದ್ದೇವೆ, ಕಂಡಿದ್ದೇವೆ.

ಇವೆಲ್ಲವುಗಳಿಗಿಂತ ಮಿಗಿಲಾಗಿ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಿರಜ ನಗರದಲ್ಲಿನ ಅವರ ಅಭಿಮಾನಿಗಳು ಮುಖ್ಯ ರಸ್ತೆಯ ಬದಿಗೆ ಮರಾಠಿ ಭಾಷೆಯಲ್ಲಿ ದಿ. ಪುನೀತರಾಜಕುಮಾರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಫಲಕವನ್ನು ಅಳವಡಿಸಿ ಅವರು ಇಲ್ಲಿಯವರೆಗೆ ನಡೆಸಿಕೊಂಡು ಬಂದಿರುವ ಸಾಮಾಜಿಕ ಕಾರ್ಯಗಳಾದ ವೃದ್ಧಾಶ್ರಮ,

ಅನಾಥ ಹೆಣ್ಣು ಮಕ್ಕಳ ಶಾಲೆ, ನಿರ್ಗತಿಕ ಮಕ್ಕಳ ಆರೈಕೆ, ಗೋಶಾಲೆ ಮೊದಲಾದ ಪಟ್ಟಿಯನ್ನು ಪ್ರಕಟಿಸಿ ದಿ. ಪುನೀತರಾಜಕುಮಾರ ಅವರು ಚಲನಚಿತ್ರಗಳಲ್ಲಿ ಹೀರೋ ಆಗಿ ಮಿಂಚುವದರ ಜತೆಗೆ ನಿಜ ಜೀವನದಲ್ಲಿಯೂ ಅವರು ಹೀರೋ ಆಗಿದ್ದರು ಎಂದು ಬಣ್ಣಿಸಿದ್ದಾರೆ. ಇದ್ದರೆ ಇಂತಹ ಹೀರೋಗಳು ಪ್ರತಿ ರಾಜ್ಯಗಳಲ್ಲಿ ಹುಟ್ಟಿ ಬರಲಿ ಎಂದು ಶುಭ ಹಾರೈಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

“ಪುನೀತ್‍ರಾಜಕುಮಾರ ಅವರು ಕರ್ನಾಟಕಕ್ಕೆ ಮಾತ್ರ ರತ್ನವಾಗಿರದೇ, ಭಾಷೆಗೂ ಮೀರಿದ ರತ್ನವಾಗಿದ್ದರೂ ಎಂಬುದನ್ನು ನಾವು ಇಲ್ಲಿ ಕಾಣಬಹುದಾಗಿದೆ.”

📱 Read Top News, Belgaum News Updates, Belagavi News in Kannada, Latest News on News Belgaum