Belagavi News In Kannada | News Belgaum

ರಾಷ್ಟ್ರೀಯ ಕ್ಯಾನ್ಸರ್ ರೋಗಿಗಳ ಜಾಗೃತಿ ದಿನಾಚರಣೆ

🌐 Belgaum News :

ಡಾ.ವಿಶ್ವರಾಜ ಬಿ.ತಡಕಲ್ ಅಭಿಮತ | ರಾಷ್ಟ್ರೀಯ ಕ್ಯಾನ್ಸರ್ ರೋಗಿಗಳ ಜಾಗೃತಿ ದಿನಾಚರಣೆ
‘ಆರೋಗ್ಯಕರ ಜೀವನ ಶೈಲಿಯಿಂದ ಕ್ಯಾನ್ಸರ್ ರೋಗ ದೂರ’

 

ಕಲಬುರಗಿ : ವಯಸ್ಸು, ಲಿಂಗ, ಅನುವಂಶೀಯತೆ, ಪರಿಸರದ ಅಂಶಗಳು, ರಾಸಾಯನಿಕ ವಸ್ತುಗಳ ಸೇವನೆ, ತಂಬಾಕು, ಆಲ್ಕೋಹಾಲ್, ವಿಷಪೂರಿತ ಆಹಾರದ ಸೇವನೆ, ಎಚ್.ಸಿ.ಬಿ, ಎಚ್.ಬಿ.ವಿ, ಇ.ಬಿ.ವಿ ಬ್ಯಾಕ್ಟಿರೀಯಾ, ಕೆಲವು ಔಷಧಗಳ ನಿರಂತರ ಸೇವನೆಯಂತಹ ಮುಂತಾದ ಕಾರಣಗಳಿಂದ ಕ್ಯಾನ್ಸರ್ ರೋಗ ಬರುತ್ತದೆ. ತಂಬಾಕು, ಮದ್ಯಪಾನ, ರಾಸಾಯನಿಕಯುಕ್ತ ಆಹಾರ ಸೇವನೆ ಮಾಡಿರುವುದು, ಸಮತೋಲಿತ ಆಹಾರ ಸೇವಿಸುವುದು, ತೂಕ ನಿರ್ವಹಣೆ ಮಾಡುವುದು ಸೇರಿದಂತೆ ಮುಂತಾದ ಆರೋಗ್ಯಕರ ಜೀವನ ಶೈಲಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕ್ಯಾನ್ಸರ್ ರೋಗ ಬರದಂತೆ ತಡೆಯಬಹುದಾಗಿದೆ ಎಂದು ತಜ್ಞ ವೈದ್ಯ ಡಾ.ವಿಶ್ವರಾಜ ಬಿ.ತಡಕಲ್ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯಿರುವ ‘ತಡಕಲ್ ಸ್ಪೇಷಾಲಿಟಿ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಜರುಗಿದ ‘ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಧುನಿಕ ಒತ್ತಡದ ಬದುಕಿನಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ದೇಹದಲ್ಲಿ ಜೀವಕೋಶಗಳ ಅಸಾಮಾನ್ಯ ಬೆಳವಣಿಗೆಯಾಗುತ್ತವೆ. ಕ್ಯಾನ್ಸರ್‍ನಲ್ಲಿ 200 ಪ್ರಕಾರಗಳಿವೆ. ಚರ್ಮದಲ್ಲಿ ಗಂಟು ಹಾಗೂ ಹಳದಿ ಬಣ್ಣಕ್ಕೆ ತಿರುಗುವುದು, ತೂಕದಲ್ಲಿ ಹೆಚ್ಚಳ ಅಥವಾ ನಷ್ಟ, ಉಸಿರಾಟದ ತೊಂದರೆ, ನಿರಂತರವಾದ ಕೀಲುನೋವು, ರಕ್ತಸ್ರಾವವಾಗುವುದು ಲಕ್ಷಣಗಳಾಗಿವೆ. ಆರಂಭದಲ್ಲಿ ಇದನ್ನು ಗುರ್ತಿಸಿ, ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯವಿದೆ. ಕ್ಯಾನ್ಸರ್ ರೋಗಿಗಳ ಬಗ್ಗೆ ಕೀಳರಿಮೆ ಬೇಡ. ಭಯ ಬೇಡ, ಮುಂಜಾಗ್ರತೆ ವಹಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲುರ, ಪ್ರಕಾಶ ಸರಸಂಬಿ, ಸಿದ್ದರಾಮ ತಳವಾರ, ಸಿದ್ದರಾಮ ತಳವಾರ, ಸೋಮೇಶ ಡಿಗ್ಗಿ, ಅನೀಲ ಪಾಟೀಲ ನಂದೂರ, ಚನ್ನವೀರ ಹುಲಿ ಪಾಟೀಲ, ಬಸವರಾಜ ದುರ್ಗದ್, ಬಸವರಾಜ ನಿರ್ಣಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum