Belagavi News In Kannada | News Belgaum

200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ

🌐 Belgaum News :

ಫ್ರೀಟೌನ್:  ತೈಲ ಟ್ಯಾಂಕರ್ ಗಳ  ಸ್ಪೋಟ್ ದಿಂದ ಸುಮಾರು 98 ಜನ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಯಾರಲಿಯೋನೆ ರಾಜಧಾನಿ ಫ್ರೀಟೌನ್ ಸಮೀಪ ನಡೆದಿದೆ.

 

ಶುಕ್ರವಾರ ರಾತ್ರಿ ವಿಲ್ಲಿಂಗ್ಟನ್ ಪ್ರದೇಶದಲ್ಲಿ ಎರಡು ಟ್ಯಾಂಕರ್‍ಗಳ ನಡುವೆ ಗ್ಯಾಸ್ ಸ್ಟೇಷನ್ ಸಮೀಪವೇ ಅಪಘಾತ ಸಂಭವಿಸಿತ್ತು.

ಅಪಘಾತವಾದ ಬಳಿಕ ಎರಡು ವಾಹನಗಳ ಚಾಲಕರು ಸುರಕ್ಷಿತವಾಗಿ ಹೊರ ಬಂದಿದ್ದರು. ಟ್ಯಾಂಕರ್‍ನಿಂದ ತೈಲ ಸೋರಿಕೆಯಾಗುತ್ತಿತ್ತು. ಅದನ್ನು ಹಿಡಿದುಕೊಳ್ಳಲು ಸುತ್ತಮುತ್ತಲಿನ ನಿವಾಸಿಗಳು ಗುಂಪು ಗೂಡಿದ್ದರು. ಅಪಾಯದ ಮುನ್ಸೂಚನೆ ಇದೆ ಯಾರೂ ಹತ್ತಿರ ಬರಬೇಡಿ ಎಂದು ಹಲವು ಬಾರಿ ಸೂಚನೆ ನೀಡಿದರೂ ಜನ ಕೇಳಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

 

ಆರ್ಥಿಕವಾಗಿ ಹಿಂದುಳಿದಿರುವ ಸಿಯಾರಲಿಯೋನೆ ದೇಶದಲ್ಲಿ ಈ ರೀತಿಯ ಗುಂಪು ಗೂಡುವಿಕೆ ಸಾಮಾನ್ಯ ಎಂದು ಹೇಳಲಾಗಿದೆ. ಡಿಕ್ಕಿಯಾಗಿದ್ದ ಟ್ಯಾಂಕರ್‍ಗಳ ಬಳಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಸೋಟಗೊಂಡಿದೆ. ಗುಂಪುಗೂಡಿದ್ದ ಜನರ ಪೈಕಿ ಬಹಳಷ್ಟು ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ 32 ಮಂದಿ ಸಾವನ್ನಪ್ಪುವ ಮೂಲಕ ಮೃತಪಟ್ಟವರ ಸಂಖ್ಯೆ 98ಕ್ಕೇರಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

📱 Read Top News, Belgaum News Updates, Belagavi News in Kannada, Latest News on News Belgaum