Belagavi News In Kannada | News Belgaum

ಭಾಗ್ಯಲಕ್ಷ್ಮಿ ಪಾಟೀಲ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

🌐 Belgaum News :

ರಾಯಚೂರು : ಜಿಲ್ಲೆಯ ಮಂಚಲಾಪೂರ ಗ್ರಾಮದ ವೈ.ಬಿ.ಪಾಟೀಲ್ ಅವರ ಪತ್ನಿ ಭಾಗ್ಯಲಕ್ಷ್ಮಿ ಪಾಟೀಲ್ (70) ಅವರ ಅಂತ್ಯಕ್ರಿಯೆ ಇಂದು ನೆರವೇರಿತು.

ಮಂಚಲಾಪೂರ ಗ್ರಾಮದಲ್ಲಿ ತೆರದ ವಾಹನದಲ್ಲಿ  11 ಗಂಟೆಗೆ ಅವರ ಮನೆಯಿಂದ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಜನರು  ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಅಗಲಿದ ತಾಯಿಗೆ ಅಂತಿಮ ನಮನ ಸಲ್ಲಿಸಿದರು.

ಕೆಲದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಪತಿ ವೈ.ಬಿ.ಪಾಟೀಲ್ , ಪುತ್ರರಾದ ರವಿಕುಮಾರ ಪಾಟೀಲ, ಆನಂದ ಪಾಟೀಲ, ಪುತ್ರಿಯರಾದ ಶಕುಂತಲಾ , ಪ್ರೇಮಾ, ಅಳಿಯರಾದ ಶಾಸಕ ಸತೀಶ್ ಜಾರಕಿಹೊಳಿ, ವಿರೇಶ ದೊಡ್ಡಮನಿ, ಮೊಮ್ಮಕ್ಕಳಾದ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಮತ್ತು ಅಪಾರ ಬಂಧು-ಬಳಗದವರು ಅಂತಿಮ ನಮನ ಸಲ್ಲಿಸಿದರು.

ಮಾಜಿ ಸಂಸದ ಬಿ.ವಿ. ನಾಯಿಕ,  ಶ್ರೀಕಾಂತರಾವ್,  ಶಿವರಾಜ್ ಪಾಟೀಲ್, ಡಾ.ಮಂಜುನಾಥ, ಚಾಮರಾಜ ಪಾಟೀಲ, ನಾರಾಯಣ ಪಾಟೀಲ, ಪಂಚನಗೌಡ ದ್ಯಾಮಗೌಡರ್, ಚಂದ್ರಶೇಖರ ಜೂಟೂರ, ಹನುಮಗೌಡ ದೇವದುರ್ಗ ಅಂತ್ಯಕ್ರಿಯೆಲ್ಲಿ ಭಾಗಿಯಾಗಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum