Belagavi News In Kannada | News Belgaum

ಜೆಕೆ ಸೂಪರ್ ಸಿಮೆಂಟ್‍ನಿಂದ ದೀಪಾವಳಿ ಅಭಿಯಾನ ಆರಂಭ

🌐 Belgaum News :

ಬೆಳಗಾವಿ : ಒಂದು ನಿರ್ದಿಷ್ಟಉದ್ದೇಶವನ್ನು ಹೊಂದಿರುವ ಬ್ರಾಂಡ್ ಆಗಿರುವ ಜೆಕೆ ಸೂಪರ್ ಸಿಮೆಂಟ್, “ಕರೇ ಹರ್‍ರಾಹ್‍ರೋಶನ್ # LightOfHappiness”ಎಂಬ ವಿಶೇಷ ದೀಪಾವಳಿ ಅಭಿಯಾನದೊಂದಿಗೆ ಹಬ್ಬಗಳನ್ನು ಸಂಭ್ರಮಿಸುತ್ತಿದೆ.

ಕರ್ನಾಟಕದ ಹಳ್ಳಿಗಳಾದ್ಯಂತ ಬೀದಿಗಳು ಮತ್ತು ಚೌಕ್‍ಗಳಲ್ಲಿ 35 ಸೌರಶಕ್ತಿಚಾಲಿತ ದೀಪಗಳನ್ನು ಸ್ಥಾಪಿಸುತ್ತದೆ. ಈ ಅಭಿಯಾನವು 12 ಲಕ್ಷಗ್ರಾಮೀಣ ಭಾರತೀಯರ ಜೀವನದಲ್ಲಿ ಭರವಸೆ, ಶಕ್ತಿ, ಸುರಕ್ಷತೆ ಮತ್ತು ಸಂತೋಷವನ್ನು ತರುವ ಉದ್ದೇಶದಿಂದ 8 ರಾಜ್ಯಗಳಲ್ಲಿ 160 ಸೌರ ಫಲಕಗಳನ್ನು ಸ್ಥಾಪಿಸಿರುವ ಜೆಕೆ ಸೂಪರ್ ಸಿಮೆಂಟ್‍ನ ರಾಷ್ಟ್ರವ್ಯಾಪಿ ಸುಸ್ಥಿರ ಉಪಕ್ರಮದ ಒಂದು ಭಾಗವಾಗಿದೆ. ಹಳ್ಳಿಗಳಾದ್ಯಂತ ಈ ಕಡುಗತ್ತಲ ಗಲ್ಲಿಗಳು ಮತ್ತು ಉಪಲೇನ್‍ಗಳನ್ನು ಜೆಕೆ ಸಿಮೆಂಟ್ ಗುರುತಿಸಿದೆ. ಕಂಪನಿಯು ಆ ಪ್ರದೇಶಗಳಲ್ಲಿ ಈ ದೀಪಗಳನ್ನು ಅಳವಡಿಸಿ ರಸ್ತೆ ಅಪಘಾತಗಳು ಮತ್ತುಇತರ ಸಂಬಂಧಿತ ತೊಂದರೆಗಳನ್ನು ತಡೆಯುವ ಉದ್ದೇಶ ಹೊಂದಿದೆ.

ಈ ಕುರಿತು ಮಾತನಾಡಿದ ಜೆಕೆ ಸಿಮೆಂಟ್ ಲಿಮಿಟೆಡ್‍ನ ಬೂದು ಸಿಮೆಂಟ್ ವ್ಯವಹಾರದ ಮಾರಾಟ ವಿಭಾಗದ ಮುಖ್ಯಸ್ಥ ಪುಷ್ಪರಾಜ್ ಸಿಂಗ್, ನಿರ್ದಿಷ್ಟ ಉದ್ದೇಶದ ಬ್ರಾಂಡ್” ಉದ್ದೇಶಕ್ಕೆ ಅನುಗುಣವಾಗಿ, ನಾವೆಲ್ಲರೂ ಒಂದೆಡೆ ಗುಂಪು ಸೇರಿ ಚರ್ಚಿಸಿ, ಈ ದೀಪಾವಳಿಯ ಸಂದರ್ಭದಲ್ಲಿ “ಜನರಜೀವನವನ್ನು ಸ್ವಲ್ಪ ಸಂತೋಷ ಮತ್ತು ಹೊಳೆಯುವಂತೆ ಜೆಕೆ ಸಿಮೆಂಟ್ ಹೇಗೆ ಮಾಡಬಹುದುಎನ್ನುವುದನ್ನು ನಿರ್ಧರಿಸಿ ಈ ಉಪಕ್ರಮಆರಂಭಿಸಲು ನಿರ್ಧರಿಸಿದೆವು. ಹೆಚ್ಚಿನಚರ್ಚೆಯ ನಂತರ, ಕತ್ತಲೆಯಾದ ಕಾಲುದಾರಿಗಳಲ್ಲಿ ಈ ದೀಪಗಳನ್ನು ಸ್ಥಾಪಿಸುವ ಉದಾತ್ತಕಲ್ಪನೆಯನ್ನುಕಂಡುಕೊಂಡೆವು. ಜನರಜೀವನದಲ್ಲಿ ಸ್ವಲ್ಪಮಟ್ಟಿಗೆ ಸಂತೋಷವನ್ನುತರಲುಇದುಜೆಕೆ ಸಿಮೆಂಟ್‍ನ ಸಣ್ಣ ಪ್ರಯತ್ನವಾಗಿದೆ” ಎಂದು ಬಣ್ಣಿಸಿದರು.

ಈ ವರ್ಷದಆರಂಭದಲ್ಲಿ, ಜೆಕೆ ಸೂಪರ್ ಸಿಮೆಂಟ್ ರಾಜಸ್ಥಾನದಜೈಪುರಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಒಂದೇ ದಿನದಲ್ಲಿ 251 ರ್ಯಾಂಪ್‍ಗಳನ್ನು ನಿರ್ಮಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿತು.

ಈ ಆಚರಣೆಯನ್ನುಗುರುತಿಸಲು ಸಿಮೆಂಟ್ ಕಂಪನಿಯುತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‍ಗಳಲ್ಲಿ #LightOfHappinessಎಂಬ ಹೃದಯವನ್ನು ಬೆಚ್ಚಗಾಗುವ 120 ಸೆಕೆಂಡುಗಳ ವೀಡಿಯೊವನ್ನು ಬಿಡುಗಡೆ ಮಾಡಿದೆ.

LightOfHappiness (YouTube link: https://youtu.be/izgmb-V1_f0)

📱 Read Top News, Belgaum News Updates, Belagavi News in Kannada, Latest News on News Belgaum