Belagavi News In Kannada | News Belgaum

ಪ್ರೀತಿಯ ತಮ್ಮನನ್ನು ನೆನೆದು ಕಣ್ಣೀರಿಟ್ಟ ರಾಘಣ್ಣ : ಅಪ್ಪು ಫೋಟೊ ಶೇರ್ ಮಾಡಿ ‘ಮತ್ತೆ ಹುಟ್ಟಿ ಬಾ ಮಗನೇ’ ಎಂದ್ರು …!

🌐 Belgaum News :

ಬೆಂಗಳೂರು:  ಪ್ರೀತಿಯ ತಮ್ಮ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡ ರಾಘವೇಂದ್ರ ರಾಜ್‌ಕುಮಾರ್ ಇದೀಗ ಪ್ರತಿದಿನವೂ ಅಪ್ಪು ಜೊತೆಗಿನ ಫೋಟೊ ಶೇರ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖ ತೋಡಿಕೊಳ್ಳುತ್ತಿರುವ ರಾಘಣ್ಣ, ಇಂದು ಕೂಡ ಅಪರೂಪದ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ರಾಜ್ ಕುಟುಂಬದ ಮೂವರು ಮಕ್ಕಳು ನಿಂತಿರುವ ಫೋಟೊ ಇದಾಗಿದೆ. ಅಣ್ಣತಮ್ಮಂದಿರು ನಡುವಿನ ಬಾಂಧವ್ಯ, ಅವರ ಪ್ರೀತಿ ಕಣ್ಣಿನಲ್ಲೇ ಕಾಣುತ್ತಿದೆ. ಫೋಟೊ ಶೇರ್ ಮಾಡಿದ್ದು, ನಿನ್ನನ್ನು ಅಗಲಿ ಇರುವುದು ತುಂಬಾನೇ ಕಷ್ಟವಾಗುತ್ತಿದೆ, ಮತ್ತೆ ಹುಟ್ಟಿ ಬಾ ಮಗನೇ ಎಂದು ಹೇಳಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum