Belagavi News In Kannada | News Belgaum

29 ಮಹಿಳೆಯರು, ಓರ್ವ ತೃತೀಯ ಲಿಂಗಿ ಸೇರಿ 119 ಮಂದಿಗೆ ‘ಪದ್ಮ’ ಪ್ರಶಸ್ತಿ ಪ್ರದಾನ

🌐 Belgaum News :

ಹೊಸದಿಲ್ಲಿ: ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ, ಪರಿಸರಪ್ರೇಮಿ ತುಳಸಿ ಗೋವಿಂದ ಗೌಡ, ಸಮಾಜ ಸೇವಕ ಹರೇಕಳ ಹಾಜಬ್ಬ, ಮಾಜಿ ಹಾಕಿ ಆಟಗಾರ ಎಂ.ಪಿ. ಗಣೇಶ್ ಅವರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ ‘ಪದ್ಮ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 119 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 7 ಪದ್ಮವಿಭೂಷಣ, 10 ಪದ್ಮಭೂಷಣ, 102 ಪದ್ಮಶ್ರೀ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ನೀಡಲಾಗಿದೆ. ಪ್ರಶಸ್ತಿ ಪಡೆದವರಲ್ಲಿ 29 ಮಹಿಳೆಯರು, ಒಬ್ಬರು ತೃತೀಯ ಲಿಂಗಿ ಸೇರಿದ್ದಾರೆ.

ರಾಜ್ಯದ 8 ಜನರಿಗೆ ಪದ್ಮ ಪ್ರಶಸ್ತಿ:

ಜಾನಪದ ಕಲಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಮಂಜಮ್ಮ ಜೋಗತಿ, ಮಂಗಳೂರಿನ ಪೊಸಪಡ್ಪು ಎಂಬ ಕುಗ್ರಾಮದಲ್ಲಿ ಶಾಲೆ ನಿರ್ಮಾಣ ಮಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಹರೇಕಳ ಹಾಜಬ್ಬ,ವೃಕ್ಷಮಾತೆ’ ಎಂದೇ ಖ್ಯಾತಿಯಾಗಿರುವ 80ರ ಆಸುಪಾಸಿನ ತುಳಸಿ ಗೋವಿಂದ ಗೌಡ ಸೇರಿದಂತೆ ರಾಜ್ಯದ ಎಂಟು ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೇಜಾವರ ಶ್ರೀ, ಡಾ.ಬಿ.ಎಂ. ಹೆಗ್ಡೆ, ಜಪಾನ್‌ನ ಮಾಜಿ ಪ್ರಧಾನಿ ಶಿಂಬೊ ಅಬೆ, ಗಾಯಕ ಎಸ್‌. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ), ನರಿಂದರ್ ಸಿಂಗ್ ಕಪಾನಿ (ಮರಣೋತ್ತರ), ಮೌಲಾನಾ ವಹೀದುದ್ದೀನ್ ಖಾನ್, ಬಿ. ಬಿ. ಲಾಲ್, ಸುದರ್ಶನ್ ಸಾಹೋ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದಾರೆ.

ಕೃಷ್ಣನ್ ನಾಯರ್, ಶಾಂತಾ ಕುಮಾರಿ ಚಿತ್ರಾ, ತರುಣ್ ಗೊಗಯ್ (ಮರಣೋತ್ತರ), ಚಂದ್ರ ಶೇಖರ ಕಂಬಾರ, ಸುಮಿತ್ರಾ ಮಹಾಜನ್, ನೃಪೇಂದ್ರ ಮಿಶ್ರಾ, ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ), ಕೇಶುಭಾಯ್ ಪಟೇಲ್ (ಮರಣೋತ್ತರ), ಕಲ್ಬೆ ಸಾದಿಕ್ (ಮರಣೋತ್ತರ), ರಜನಿಕಾಂತ್ ದೇವಿದಾಸ್ ಶ್ರಾಫ್, ತರ್‌ಲೋಚನ್ ಸಿಂಗ್ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಸಿನಿ ರಂಗದಲ್ಲಿ ಕಂಗನಾ ರಣಾವತ್‌, ಕರಣ್‌ ಜೋಹರ್‌ ಅವರಿಗೂ ಪದ್ಮಶ್ರೀ ಸಿಕ್ಕಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum