Belagavi News In Kannada | News Belgaum

ಪದ್ಮಶ್ರೀ ಪಡೆಯಲು ಬರಿಗಾಲಲ್ಲೇ ಬಂದ ಅಕ್ಷರ ಸಂತ; ಕರ್ನಾಟಕದ ಹಾಜಬ್ಬರನ್ನ ಅಚ್ಚರಿಯಿಂದಲೇ ಕಣ್ತುಂಬಿಕೊಂಡ ರಾಷ್ಟ್ರಪತಿ

🌐 Belgaum News :

ಹೊಸದಿಲ್ಲಿ: ಅಕ್ಷರ ಸಂತ ಅಂತಲೇ ಖ್ಯಾತಿ ಪಡೆದಿರುವ ದಕ್ಷಿಣಕನ್ನಡದ ಹರೆಕಾಳ ಹಾಜಬ್ಬ ಇಂದು ಹೊಸದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರವನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್​ರಿಂದ ಪಡೆದುಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಖ್ಯಾತನಾಮರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಗುವಿನಂತೆ ಬರಿಗಾಲ್ಲೇ ಹೆಜ್ಜೆ ಹಾಕುತ್ತಾ ಬಂದ ಅಕ್ಷರ ಸಂತ ಹಾಜಬ್ಬರಿಗೆ ರಾಷ್ಟ್ರಪತಿಗಳು ಪದ್ಮಶ್ರೀ ಪ್ರದಾನ ಮಾಡಿದ್ದಾರೆ.

ಸ್ವತಃ ಅನಕ್ಷರಸ್ಥರಾಗಿದ್ದರೂ ಬೀದಿ ಬದಿಯಲ್ಲಿ ಕಿತ್ತಳೆ ವ್ಯಾಪಾರ ಮಾಡುತ್ತಲೇ ತನ್ನ ಸ್ವಂತ ದುಡಿಮೆಯಲ್ಲೇ ಶಾಲೆ ಕಟ್ಟಿದ ಹಾಜಬ್ಬರಿಂದ ಇಂದು ನೂರಾರು ಮಕ್ಕಳು ಶಿಕ್ಷಿತರಾಗಿದ್ದಾರೆ. ತಮಗೆ ಬಂದ ಪ್ರಶಸ್ತಿಯ ಮೊತ್ತವನ್ನೂ ಶಾಲೆಗಾಗಿ ಅರ್ಪಿಸಿದ ಹಾಜಬ್ಬರಿಗೆ ಕೇಂದ್ರ ಸರ್ಕಾರ 2020ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರವನ್ನ ಘೋಷಿಸಿತ್ತು.

ಅದರಂತೆ ಇಂದು ಅವರು ಪದ್ಮಶ್ರೀ ಪುರಸ್ಕಾರ ಪಡೆಯಲು ಬಂದಾಗ ರಾಷ್ಟ್ರಪತಿ ರಾಮನಾಥ್ ಕೋವಿಂದ ಅಚ್ಚರಿಯಿಂದಲೇ ತದೇಕ ಚಿತ್ತದಿಂದ ಹಾಜನಬ್ಬರನ್ನು ಕಣ್ತುಂಬಿಕೊಂಡಿದ್ದಾರೆ. ಒಂದೆಡೆ ಅವರು ಪದ್ಮಶ್ರೀ ಪಡೆಯುತ್ತಲೇ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಉಳಿದ ಪುರಸ್ಕೃತರು ಜೋರಾದ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದ್ರು. ಇನ್ನೊಂದೆಡೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕ್ಯಾಮರಾದತ್ತ ನೋಡುವಂತೆ ಹಾಜನಬ್ಬರಿಗೆ ತಿಳಿಸಿ ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದು ಕೂಡ ವಿಶೇಷವಾಗಿತ್ತು./////

📱 Read Top News, Belgaum News Updates, Belagavi News in Kannada, Latest News on News Belgaum