Belagavi News In Kannada | News Belgaum

ದೇಶದ ಶೇ 80 ರಷ್ಟು ಜನರಿಗೆ ಉಚಿತ ಕಾನೂನು ನೇರವು : ಸಿ.ಎಂ.ಜೋಶಿ

🌐 Belgaum News :

ಚಿಕ್ಕೋಡಿ: ನಮ್ಮ ದೇಶದ ಸಂವಿಧಾನ ಎಲ್ಲ ಕಾನೂನುಗಳಿಗೂ ತಾಯಿ ಬೇರು ಇದ್ದಂತೆ. ದೇಶದಲ್ಲಿರುವ ಎಲ್ಲರಿಗೂ ಕಾನೂನಿನ ನೆರವು ದೊರೆಯಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಪ್ರದಾಧಿಕಾರ ರಚನೆ ಮಾಡಲಾಗಿದೆ ಎಂದು  ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷಕರು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ.ಜೋಶಿ ಹೇಳಿದರು.

ತಾಲೂಕಿನ ಡೋಣವಾಡ ಗ್ರಾಮದಲ್ಲಿ ನಡೆದ 75 ನೇಯ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ವಿಶೇಷ ಬೃಹತ್ ರಾಷ್ಟ್ರೀಯ ಕಾನೂನು ಸಾಕ್ಷರತಾ ಅಭಿಯಾನ ಪ್ರಯುಕ್ತ ವಿಶೇಷ ಬೃಹತ್ ಕಾನೂನು ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಅನೇಕ ಕಾನೂನು ಜಾರಿಯಲ್ಲಿವೆ. ಆದರೆ ಮನುಷ್ಯನಿಗೆ ದಿನನಿತ್ಯದಲ್ಲಿ ಬೇಕಾದ ಕಾನೂನು ಅಳವಡಿಸಿಕೊಂಡರೇ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ದೇಶದ ಶೇ 80 ರಷ್ಟು ಜನರಿಗೆ ಉಚಿತ ಕಾನೂನು ನೇರವು ಸಿಗಲಿದೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸುವುದು ಮತ್ತು ಜನರಿಗೆ ಉಚಿತ ಕಾನೂನು ಸೇವೆ ನೀಡಲು ಕಾನೂನು ಪ್ರಾಧಿಕಾರ ಮುಂದೆ ಬರುತ್ತದೆ ಎಂದು ಹೇಳಿದರು.
1997 ರಲ್ಲಿ ರಚನೆಯಾದ ಕಾನೂನು ಪ್ರಾಧಿಕಾರ. ಇಂದು ಪ್ರತಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುತ್ತಿದೆ.  ಕೋವಿಡ್ ಹೋಗಲಾಡಿಲು ಎಲ್ಲರ ಶ್ರಮ ಅವಶ್ಯಕವಾಗಿದೆ. ಆರೋಗ್ಯ ಸೇವೆ ಹೆಚ್ಚಾಗಲು ಮೂಲಭೂತ ಸೌಲಭ್ಯ ಒದಗಿಸುವುದು ಅವಶ್ಯಕವಾಗಿದೆ ಎಂದರು.                    ಕಾನೂನು ನೇರವು ಅಭಿಯಾನ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದರು.

ಚಿಕ್ಕೋಡಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀಕಾಂತ ಟಿ ಮಾತನಾಡಿ, ಸಂವಿಧಾನ ಆಸೆಯದಂತೆ ಎಲ್ಲರಿಗೂ ನ್ಯಾಯ ಸಿಗಬೇಕು. ಯಾರು ಕಾನೂನಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕಾನೂನು ನೇರವು ಅರಿವು ಮೂಡಿಸಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಮಾತನಾಡಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ರಾಜ್ಯ ಉಪಾಧ್ಯಕ್ಷ ಕಲ್ಮೇಶ ಕಿವಡ ಮಾತನಾಡಿರು. ಹಿರಿಯ ನ್ಯಾಯವಾದಿಗಳಾದ ಎಸ್.ಟಿ.ಮುನ್ನೋಳ್ಳಿ ಮತ್ತು ಎಂ.ಬಿ.ಪಾಟೀಲ ಉಪನ್ಯಾಸ ನೀಡಿದರು.
ಪ್ರಧಾನ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಬಾಗಡೆ, ಅಶೋಕ ಆರ್.ಎಚ್, ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ, ಸರ್ಕಾರಿ ವಕೀಲ ಆರ್.ಐ.ಖೋತ, ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಐ.ಪಾಟೀಲ, ಹಿರಿಯ ನ್ಯಾಯವಾದಿ ಟಿ.ವೈ.ಕಿವಡ, ಅರ್ಜುನ ಕಿವಡ, ಸತೀಶ ಕುಲಕರ್ಣಿ., ಎಸ್.ಎಸ್.ದೊಡಮನಿ, ಬಿ.ಆರ್.ಕಮತೆ, ಎಸ್.ಆರ್.ಹರಕೆ, ರಮೇಶ ಹಿತ್ತಲಮನಿ, ರವಿ ಹಿರೇಕೂಡಿ ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ ಸ್ವಾಗತಿಸಿದರು. ಪ್ರಕಾಶ ಕೋಂಕಣಿ ಮತ್ತು ಬಸವರಾಜ ಮಠಪತಿ ನಿರೂಪಿಸಿದರು./////

📱 Read Top News, Belgaum News Updates, Belagavi News in Kannada, Latest News on News Belgaum