Belagavi News In Kannada | News Belgaum

ನೋಟು ನಿಷೇಧಕ್ಕೆ 5 ವರ್ಷ; 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ್ದ ದಿನ

🌐 Belgaum News :

ಹೊಸದಿಲ್ಲಿ: ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮಖಬೆಲೆಯ ಹಳೆಯ ನೋಟುಗಳನ್ನು ರದ್ದುಗೊಳಿಸಿ ಇಂದಿಗೆ (ನವೆಂಬರ್ 8) 5 ವರ್ಷ ಪೂರ್ಣಗೊಂಡಿದೆ.

ಈ 5 ವರ್ಷಗಳಲ್ಲಿ ಡಿಜಿಡಲ್ ಪಾವತಿ ಜೊತೆಗೆ ನೋಟುಗಳ ಚಲಾವಣೆಯಲ್ಲೂ ಹಿಂದಿಗಿಂತ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಕಪ್ಪು ಹಣ ನಿಗ್ರಹ ಮತ್ತು ಡಿಜಿಟಲ್ ಪಾವತಿ ಹೆಚ್ಚಿಸಲು 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಸರ್ಕಾರ ಆದೇಶಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚಳವಾದರೂ, ನೋಟುಗಳ ಚಲಾವಣೆ ಕಡಿಮೆಯಾಗಿಲ್ಲ.

ದತ್ತಾಂಶಗಳ ಪ್ರಕಾರ 2016ರ ನವೆಂಬರ್ 4ರ ವೇಳೆಗೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಮೌಲ್ಯ 17.74 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, 2021ರ ಅಕ್ಟೋಬರ್ 29 ರಂದು ಆ ಪ್ರಮಾಣ 29.17 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲೇ ಚಲಾವಣೆ ನೋಟುಗಳ ಮೌಲ್ಯ 2.48 ಲಕ್ಷ ಕೋಟಿ ರೂಪಾಯಿ ನಷ್ಟು ಹೆಚ್ಚಳವಾಗಿದೆ. ಅಂದರೆ ಒಂದು ವರ್ಷದಲ್ಲಿ ನೋಟುಗಳ ಮೌಲ್ಯವು ಶೇ.16.8 ರಷ್ಟು ಏರಿಕೆಯಾಗಿದೆ.

ಜನಸಾಮಾನ್ಯರಿಗೆ ಕರಾಳ ದಿನ:

ನೋಟ್ ಬ್ಯಾನ್ ಜನಸಾಮಾನ್ಯರಿಗೆ ಕರಾಳ ದಿನವಾಗಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಜನಸಾಮಾನ್ಯರು ಸೇರಿದಂತೆ ದೇಶದ ಬಹುತೇಕರು ತೊಂದರೆಗೆ ಒಳಗಾಗಿದ್ದರು. ಇದರ ಪರಿಣಾಮ ದೇಶದ ಆರ್ಥಿಕತೆಯ ಮೇಲೂ ಉಂಟಾಗಿತ್ತು. ಇಂದಿನ ಬೆಲೆ ಏರಿಕೆಗೆ ನೋಟ್ ಬ್ಯಾನ್ ಕೂಡ ಒಂದು ಕಾರಣವಾಗಿದೆ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum