Belagavi News In Kannada | News Belgaum

ಕಾಕತಿ ಪೋಲೀಸರ ಮಡಿಲಿಗೆ ಬಿದ್ದ ಅತ್ಯಾಚಾರಿ.

🌐 Belgaum News :

ಬೆಳಗಾವಿ: ಕಟ್ಟಿಗೆ ಅಡ್ಡೆಯಲ್ಲಿ ವಾಚಮನ್ ಕೇಲಸ ಮಾಡುತ್ತಿರುವ 8 ವರ್ಷದ ಮಗಳ ಮೇಲೆ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಪುಸಲಾಯಿಸಿ ಅತ್ಯಾಚಾರ ನಡೆಸಿರುವ ಘಟನೆ ಶುಕ್ರವಾರ (ನವಂಬರ್ 5) ರಂದು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ನಡೆದಿದೆ.

 

ಕಾಕತಿ ಗ್ರಾಮದ ಬಾರ್ ಒಂದರ ಸಮೀಪದಲ್ಲಿರುವ ಕಟ್ಟಿಗೆ ಅಡ್ಡೆಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರಕ್ಕೂಳಗಾಗಿರುವ ಬಾಲಕಿ ತಂದೆ ವಾಚಮಾನ್ ಹಾಗೂ ಉತ್ತರ ಪ್ರದೇಶ ರಾಜ್ಯದ 24 ವರ್ಷದ ಯುವಕ ಒಂದೆ ಅಡ್ಡೆಯಲ್ಲಿ ಕೇಲಸ ಮಾಡುತ್ತಿದ್ದು, ಯಾರು ಇಲ್ಲದ ಸಮಯ ನೋಡಿದ ಯುವಕ ವಾಚಮನ್ ಮಗಳನ್ನು ಮೊಬೈಲ್ ದಲ್ಲಿ ಗೇಮ್ ಆಡಲು ಕಲಿಸುತ್ತೆನೆ ಎಂದು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ.

 

ನಂತರ ಅಳುತ್ತಿದ್ದ ಬಾಲಕಿಯನ್ನು ಪಾಲಕರು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಅಷ್ಟರೊಳಗೆ ನಿಚ್ ಕೃತ್ಯ ನಡೆಸಿದ್ದ ಯುವಕ ಪರಾರಿಯಾಗಲು ತಯಾರಿ ನಡೆದಿದ್ದಾಗಿ ತಿಳಿದು ಬಂದಿದೆ.

 

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಎತ್ತೆಚ್ಚುಕೊಂಡು ಕಾಕತಿ ಪಿಐ ಗುರುನಾಥ ಆಯ್ ಎಸ್, ಪಿಎಸ್ಐ ಅವಿನಾಶ ಯರಗೊಪ್ಪ ಪರಾರಿಯಾಗುತ್ತಿದ್ದ ನಿಚ್ ಸೊನ್ಯಾನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಂಗ ವಶಕ್ಕೆ ನೀಡುವ ಪ್ರಕ್ರಿಯೆ ನಡೆದಿರುವುದಾಗಿ ತಿಳಿದು ಬಂದಿದೆ.

 

ಸಂತ್ರಸ್ತೆ ಕುಟುಂಬಕ್ಕೆ ಸೂಕ್ತ ಸುರಕ್ಷೆ ನೀಡಿದ ಡಿಸಿಪಿ ಅಮಟೆ..!

 

ಆರೋಪಿ ಯುವಕನ ರಾಜ್ಯದವರು ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಾಲಕಿ ಕುಟುಂಬದವರ ಮೇಲೆ ಯಾವುದೇ ರೀತಿಯ ಬೇದರಿಕೆ ಮತ್ತು ಒತ್ತಡ ಹೇರದಂತೆ ಡಿಸಿಪಿ ವಿಕ್ರಂ ಅಮಟೆ ಸೂಕ್ತ ಕ್ರಮ ಕೈಕೊಂಡಿದ್ದಾಗಿ ತಿಳಿದು ಬಂದಿದೆ.

 

📱 Read Top News, Belgaum News Updates, Belagavi News in Kannada, Latest News on News Belgaum