Belagavi News In Kannada | News Belgaum

ಪ್ರಾಣ ಕಳೆದುಕೊಳ್ಳಲು ಕೆರೆಗೆ ಹಾರಿದ ವ್ಯಕ್ತಿಯನ್ನುರಕ್ಷಣೆ ಮಾಡಿದ ಕಾಲೇಜು ವಿದ್ಯಾರ್ಥಿನಿ

🌐 Belgaum News :

ಕೊಡಗು : ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರನ್ನು ನಮ್ರತಾ  (17) ಎಂಬ ವಿದ್ಯಾರ್ಥಿನಿ ಜೀವದ ಹಂಗು ತೊರೆದು ಕೆರೆಗೆ ಹಾರಿ ರಕ್ಷಣೆ ಮಾಡಿದ್ದಾಳೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಗ್ರಾಮದ ಬಳಿ ವ್ಯಕ್ತಿ ಕೆರೆಗೆ ಹಾರಿದ್ದರು. ಆ ವೇಳೆ ವ್ಯಕ್ತಿ ಮುಳುಗುತ್ತಿರುವುದನ್ನು ನೋಡಿದ ವಿದ್ಯಾರ್ಥಿನಿ ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾಳೆ.

10 ಅಡಿಗೂ ಅಧಿಕ ಆಳವಿದ್ದ ಕೆರೆ ಅದಾಗಿದೆ. ವಿದ್ಯಾರ್ಥಿನಿ ನಮ್ರತಾಳ ಈ ಸಾಹಸಕ್ಕೆ ಎಲ್ಲರ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗುತ್ತಿದೆ/////

📱 Read Top News, Belgaum News Updates, Belagavi News in Kannada, Latest News on News Belgaum