Belagavi News In Kannada | News Belgaum

ಡೆತ್ ನೋಟ್ ಬರೆದಿಟ್ಟು ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನೇಣಿಗೆ ಶರಣು

🌐 Belgaum News :

ಬೆಂಗಳೂರು : ಸಾಲಬಾಧೆ ಹಿನ್ನೆಲೆ ಹೆಡ್ ಕಾನ್ ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ದುಬಾಸಿಪಾಳ್ಯದ ನಿವಾಸಿ ಕುಮಾರ್(36) ಮೃತ ಹೆಡ್ ಕಾನ್‌ಸ್ಟೇಬಲ್.  ಪಶ್ವಿಮ ವಿಭಾಗದ ಸಶಸ್ತ್ರ ವಿಭಾಗದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಉಳ್ಳಾಲದಲ್ಲಿರುವ ಸಿಎಆರ್ ಕಚೇರಿಗೆ ಸೋಮವಾರ ಕರ್ತವ್ಯಕ್ಕೆಂದು ತೆರಳಿದ್ದರು.

ಯಾರೂ ಇಲ್ಲದಿರುವಾಗ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ./////

📱 Read Top News, Belgaum News Updates, Belagavi News in Kannada, Latest News on News Belgaum