Belagavi News In Kannada | News Belgaum

ಪ್ರೀತಿಗೆ ಜಾತಿ ಅಡ್ಡಿ: ವಿಷ ಸೇವಿಸಿದ ಪ್ರೇಮಿಗಳು; ಪ್ರಿಯಕರ ಸಾವು

🌐 Belgaum News :

ಶಿವಮೊಗ್ಗ: ಪ್ರೀತಿಗೆ ಜಾತಿ ಅಡ್ಡಿಯಾದ ಕಾರಣ, ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಪ್ರಿಯಕರ ಸಾವನ್ನಪ್ಪಿದ್ದಾನೆ. ಕುಂಸಿ ಠಾಣಾ ವ್ಯಾಪ್ತಿಯ ಹೆಗ್ಗನಕೆರೆಯಲ್ಲಿ ಘಟನೆ ‌ನಡೆದಿದೆ. ಚೋರಡಿ‌ ಸಮೀಪದ‌ ರಾಮನಗರ ವಾಸಿಗಳಾದ ಶ್ರೀನಿವಾಸ್ (23) ಹಾಗೂ ವೀಣಾ (21)  ವಿಷ ಸೇವಿಸಿದ ಪ್ರೇಮಿಗಳು.

ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಕರ ಶ್ರೀನಿವಾಸ್ ಸಾವನ್ನಪ್ಪಿದ್ದಾನೆ. ಶ್ರೀನಿವಾಸ್ ಮತ್ತು ವೀಣಾ ಬೇರೆ ಬೇರೆ ಜಾತಿಯಾದ ಕಾರಣ ಮದುವೆಗೆ ಎರಡು ಕುಟುಂಬಗಳು‌ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಪ್ರೇಮಿಗಳು ಆತ್ಮಹತ್ಯೆಗೆ ನಿರ್ಧರಿಸಿದ್ದರು. ನಿನ್ನೆ ಹೊರಬೈಲಿಗೆ ಹೋಗುವ ಮಾರ್ಗದ ಹೆಗ್ಗನಕೆರೆ ಬಳಿ‌ ಇಬ್ಬರು ವಿಷ ಸೇವಿಸಿದ್ದರು. ಸ್ಥಳೀಯರು‌ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶ್ರೀನಿವಾಸ್ ಪರಿಸ್ಥಿತಿ ಗಂಭೀರವಾಗಿತ್ತು. ಇಂದು ಬೆಳಿಗ್ಗೆ ಶ್ರೀನಿವಾಸ್ ಸಾವನ್ನಪ್ಪಿದ್ದಾನೆ. ಕುಂಸಿ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ‌ ಕೈಗೊಂಡಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum