Belagavi News In Kannada | News Belgaum

ಹುಕ್ಕೇರಿ: ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ರವೀಂದ್ರ ಮೊರಗಾಲಿ

🌐 Belgaum News :

ಚಿಕ್ಕೋಡಿ:  ಜೀವನದಲ್ಲಿ ಯಶಸ್ಸು ಗಳಿಸಬೇಕೆಂದರೆ  ಸತತ ಪರಿಶ್ರಮ ಹಾಗೂ ಶಿಸ್ತು ಅತ್ಯವಶ್ಯವಾಗಿದೆ ಎಂದು ಹುಕ್ಕೇರಿಯ ಗ್ರಾಮೀಣ ನೀರು ಪೂರೈಕೆ ಸಹಾಯಕ ಇಂಜಿನಿಯರ್ ರವೀಂದ್ರ ಮೊರಗಾಲಿ ಹೇಳಿದರು.

ಹುಕ್ಕೇರಿ ತಾಲೂಕಿನ ನಿಡಸೋಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.   ಯಶಸ್ಸುಗಾಗಿ ಕನಸು ಕಂಡರೇ ಸಾಲದು, ನಿತ್ಯವೂ ನಮ್ಮಿಂದ ಶ್ರಮಬೇಕು. ನಿಷ್ಕಲ್ಮಶ ಪ್ರೀತಿ, ಒಳ್ಳೆಯ ಆಲೋಚನೆಗಳನ್ನು ನಿಮ್ಮನ್ನು ಯಶಸ್ಸು ಕಡೆಗೆ ಕೊಂಡಯ್ಯೊಲು ಸಾಧ್ಯ ಎಂದರು.

ಇಂದ್ರಜಿತ ನಾಯಕ ಮಾತನಾಡಿ,  ಇಗಿನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಬೇಕಾದರೆ  ನೂತನ ಆವಿಷ್ಕಾರ ಹಾಗೂ ಅಗತ್ಯ ಬೇಡಿಕೆಗಳನ್ನು ಮಾರುಕಟ್ಟೆ ಪರಿಸಬೇಕೆಂದರು.  ಅದಕ್ಕಾಗಿ ಗುಣಮಟ್ಟದ ಶಿಕ್ಷಣ ಪಡೆದು, ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದರು.   ವೃತ್ತಿ ಜೀವನದಲ್ಲಿ ಎಲ್ಲಿವರೆಗೂ ಕ್ರಿಯಾಶೀಲರಾಗಿ ಕಾರ್ಯನಿರ್ವಸುತ್ತೆವೆ ಅಲ್ಲಿವರೆಗೂ ಯಶಸ್ವಿ ನಮ್ಮ ಪಾಲಾಗಿರುತ್ತದೆ ಎಂದು ಹೇಳಿದರು.

ಪ್ರಾಚಾರ್ಯ  ಬಿ.ಆರ್.ಉಮರಾಣೆ ಮಾತನಾಡಿ, ಹೊರಹೋಗುತ್ತಿರುವ  ವಿದ್ಯಾರ್ಥಿಗಳು  ತಾವು ಕಲಿತ ಕಾಲೇಜಿಗೆ, ನಿಮ್ಮ ಗುರುಹಿರಿಯರಿಗೆ  ಕೀರ್ತಿ ತರುವಂತಹ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು.  ದೃಡ ನಿರ್ಧಾರದ ಮೂಲಕ ಸವಾಲುಗಳನ್ನು ಮೆಟ್ಟಿನಿಲ್ಲುವ  ಛಾತಿಯನ್ನು  ಬೆಳೆಸಿಕೊಳ್ಳಬೇಕು. ಆಗ ಯಶಸ್ಸು ಕಷ್ಟಸಾದ್ಯವಲ್ಲ ಎಂದು ಹೇಳಿದರು.

 

ಬಸವರಾಜ ಖೋತ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಪಾಟೀಲ ಸ್ವಾಗತಿಸಿದರು. ಅಂಕಿತಾ ನಿಲಾಜ ನಿರೂಪಿಸಿದರು. ಸೋಮೇಶ ಭೋಸ್ಲೆ ವಂದಿಸಿದರು.   /////

📱 Read Top News, Belgaum News Updates, Belagavi News in Kannada, Latest News on News Belgaum