Belagavi News In Kannada | News Belgaum

ಆದೇಶ ಉಲ್ಲಂಘಿಸಿ, ಹಲಗಾ -ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ: ಗುತ್ತಿಗೆದಾರರ ದಬ್ಬಾಳಿಕೆ ಖಂಡಿಸಿ ರೈತರು ಪ್ರತಿಭಟನೆ

🌐 Belgaum News :

ಬೆಳಗಾವಿ:  ಉಳುವ ಭೂಮಿಯ  ಮೇಲೆ  ಗುತ್ತಿಗೆದಾರರು   ಹಲಗಾ -ಮಚ್ಛೆ ಬೈಪಾಸ್ ರಸ್ತೆಯನ್ನು  ನಿರ್ಮಿಸುತ್ತಿರುವುದು ಖಂಡನೀಯ, ರೈತರ ಮೇಲೆ ದಬ್ಬಾಳಿಕೆ ಮಾಡಿ  ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ರೈತ ಸಂಘಟನೆಗಳು  ರಸ್ತೆ ತಡೆದು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

ಕಾಮಗಾರಿ ನಡೆಸುತ್ತಿದ್ದ ಸ್ಥಳದಲ್ಲಿಯೇ ರೈತ ಸಂಘಟನೆ ಟೈಯರ್ ಗೆ ಬೆಂಕಿ ಕಚ್ಚಿ ಗುತ್ತಿಗೆದಾರರ ವಿರುದ್ದ ಅಸಮಾಧಾನ ಹೋರಹಾಕಿದ್ದಾರೆ.

ಗುಣಮಟ್ಟ ಜಮೀನನ್ನು  ಗುತ್ತಿಗೆದಾರರು ಅಕ್ರಮವಾಗಿ ಅಕ್ರಮಿಸಿಕೊಂಡಿದ್ದಾರೆ.  ಈ ಕುರಿತು ನ್ಯಾಯಾಲಯದ ಆದೇಶ ಕೂಡ ಇದೆ.   ನ್ಯಾಯಾಲಯದ ಆದೇಶವನ್ನು ಗುತ್ತಿಗೆದಾರರು ಕಾನೂನಾತ್ಮಾಕವಾಗಿ  ಉಲ್ಲಂಘಿಸಿ, ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೋರಹಾಕಿದ್ದಾರೆ.

ಗುತ್ತಿಗೆದಾರರು  ನ್ಯಾಯಾಲಯದ ಆದೇಶದ ವಿರುದ್ಧ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಜೀರೋ ಪಾಯಿಂಟ್‍ನ್ನು ಗುರುತಿಸದೇ ಕಾನೂನು ಉಲ್ಲಂಘನೆಯಾಗಿದೆ. ರೈತರನ್ನು ನಿಂದಿಸಿ, ಗುಂಡಾ ವರ್ತನೆ ಮಾಡುತ್ತಿರುವುದು ರೈತರು ಸಹಿಸಲು ಸಾಧ್ಯವಿಲ್ಲ ರೈತಮುಖಂಡ ಪ್ರಕಾಶ ನಾಯಕ್ ಕಿಡಿಕಾರಿದ್ದಾರೆ.

ಅಧಿವೇಶನ ವೇಳೆ ಪ್ರತಿಭಟನೆ: ಈ ಜಮೀನಿನ ಗುಣಮಟ್ಟವನ್ನು ಪರಿಶೀಲನೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸಾಕಷ್ಟು ಭಾರೀ ಮನವಿ ಮಾಡಿಕೊಳ್ಳಲಾಗಿದೆ. ಮೇಲಾಧಿಕಾರಿಗಳು ಸೂಚಿಸಲಾಗಿದೆ ಎಂದು ತಿಳಿಸಿದರು. ಇಲ್ಲಿವರೆಗೂ ಈ ಮಣ್ಣಿನ ಗುಣಮಟ್ಟವನ್ನು ತನಿಖೆ ನಡೆಸಿಲ್ಲ. ಈಗ ಗುತ್ತಿಗೆದಾರರು  ಬಂದು ಏಕಾಏಕಿಯಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.  ರೈತರ ತಾಳ್ಮೆ ಪರೀಕ್ಷೆ ಮಾಡುವುದು ಸರಿಯಲ್ಲ.

ಡಿಸೆಂಬರ್ ನಲ್ಲಿ  ಅಧಿವೇಶನ ನಡೆಯಲಿದ್ದು, ಸರ್ಕಾರವನ್ನು ಎಚ್ಚರಲಿಸಲಿದ್ದೆವೆ ಎಲ್ಲವನ್ನು ಅರಿತುಕೊಂಡು ನಡೆಯಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದರು./////

📱 Read Top News, Belgaum News Updates, Belagavi News in Kannada, Latest News on News Belgaum