Belagavi News In Kannada | News Belgaum

ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಸಕ ಶ್ರೀಮಂತ ಪಾಟೀಲರು ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ತಮ್ಮ ಕ್ಷೇತ್ರದ ಪ್ರತಿ ಗ್ರಾಮಗಳ ಬಡ ಜನರಿಗೆ ಸಿಹಿ

🌐 Belgaum News :

ಶೇಡಬಾಳ :: ಕಾಗವಾಡ ವಿಧಾನ ಸಭಾ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಸಕ ಶ್ರೀಮಂತ ಪಾಟೀಲರು ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ತಮ್ಮ ಕ್ಷೇತ್ರದ ಪ್ರತಿ ಗ್ರಾಮಗಳ ಬಡ ಜನರಿಗೆ ಸಿಹಿ ತಿಂಡಿಗಳಾದ ಬುಂದೆಲಾಡು, ಚಕ್ಕುಲಿ, ಚೋಡಾ, ಮೊದಲಾದ ತಿಂಡಿಗಳ ಪೊಟ್ಟಣಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ದೀಪಾವಳಿ ಹಬ್ಬವು ಪ್ರತಿಯೊಬ್ಬರ ಬಾಳಿನಲ್ಲಿನ ಅಂಧಕಾರವನ್ನು ತೊರೆದು ಬೆಳಕಿನತ್ತ ಸಾಗಲಿ ಎಂಬ ಮಹದಾಸೆ ಹೊಂದಿರುತ್ತಾರೆ.

 

ತಮ್ಮ ಕ್ಷೇತ್ರದಲ್ಲಿನ ಪ್ರತಿಯೊಬ್ಬರು ಬೆಳಕಿನ ಹಬ್ಬವನ್ನು ಆಚರಿಸಲಿ ಈ ಹಬ್ಬದಿಂದ ವಂಚಿತರಾಗದಿರಲಿ ಎಂಬ ಸದುದ್ದೇಶದಿಂದ ಕಳೆದ 20 ವರ್ಷಗಳಿಂದ ಶಾಸಕ ಶ್ರೀಮಂತ ಪಾಟೀಲರು ತಮ್ಮ ಫೌಂಡೇಶನ ವತಿಯಿಂದ ತಮ್ಮ ಕಾರ್ಯಕರ್ತರ ಮೂಲಕ ಪ್ರತಿ ಮನೆಮನೆಗೆ ತೆರಳಿ ಸಿಹಿ ಹಂಚುವ ಕಾರ್ಯವನ್ನು ಕೈಗೊಂಡಿದ್ದಾರೆ. ಹಿಂದುಗಳ ಹಬ್ಬವಾಗಿರುವ ದೀಪಾವಳಿ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಲಿ ಎಂಬ ಉದ್ದೇಶದಿಂದ ಅವರ ಮನೆಗಳಿಗೂ ಸಿಹಿ ಹಂಚಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಯಾವುದೋ ಕಾರಣಕ್ಕೆ ಅವರ ಕುಟುಂಬಸ್ಥರು ಮೃತರಾಗಿ ಹಬ್ಬ ಆಚರಿಸದೇ ಇರುವ ಕುಟುಂಬಗಳಿಗೆ ಸಿಹಿ ಪೊಟ್ಟಣಗಳನ್ನು ನೀಡುತ್ತಾ ಬಂದಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಕ್ಷೇತ್ರದ ಯಾವುದೇ ಬಡ ಜನರು ದಿನದಲಿತರು, ನಿರ್ಗತಿಕರು, ಅನ್ಯ ಧರ್ಮಿಯರು, ದೀಪದ ಹಬ್ಬ ದೀಪಾವಳಿಯಿಂದ ವಂಚಿತರಾಗದೇ ಎಲ್ಲರ ಜತೆ ಸಡಗರ ಸಂಭ್ರಮ, ಸಂತೋಷದಿಂದ ಸಹೋದರತ್ವದ ಭಾವನೆಯಿಂದ ಹಬ್ಬವನ್ನು ಆಚರಿಸಲಿ ಎಂಬುದುವುದೇ ಶಾಸಕ ಶ್ರೀಮಂತ ಪಾಟೀಲರ ಹಾಗೂ ಅವರ ಪುತ್ರರ ಮನದಾಸೆಯಾಗಿದೆ. ಆ ಕಾರಣದಿಂದಲೇ ಪ್ರತಿವರ್ಷ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಚಾಚುತಪ್ಪದೇ ಕೋಟ್ಯಾಂತರ ರೂ. ಖರ್ಚು ಮಾಡಿ ಸಿಹಿ ಹಂಚುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಸಾಮಾಜಿಕ ಕಳಕಳಿಗೆ ಕ್ಷೇತ್ರದ ಬಡ ಜನರೆಲ್ಲಾ ಇವರನ್ನು ಕೊಂಡಾಡುತ್ತಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum