Belagavi News In Kannada | News Belgaum

33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋವುಗಳನ್ನು ಸಾಕಿ ಸಲುಹುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

🌐 Belgaum News :

ಶೇಡಬಾಳ: ನಮ್ಮ ಭಾರತೀಯ ಸಂಸ್ಕøತಿಯಂತೆ 33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಗೋವುಗಳನ್ನು ಸಾಕಿ ಸಲುಹುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಅವರು ದೀಪಾವಳಿಯ ಬಲಿಪಾಡ್ಯ ಅಂಗವಾಗಿ ಕೆಂಪವಾಡದ ಶಾಸಕರ ಕಾರ್ಯಾಲಯದ ಆವರಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಗೋವುಗಳಿಗೆ ಪೂಜೆ ನೆರವೇರಿಸಿ ಮಾತನಾಡಿದರು. ಗೋವುಗಳನ್ನು ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋ ಮಾತೆಯನ್ನು ಪೂಜಿಸಿ ಸಂರಕ್ಷಿಸೋಣ ಎಂದು ಹೇಳಿದರು. ಅರಿಸಿನ-ಕುಂಕುಮ, ಹೂವುಗಳಿಂದ ಸಿಂಗರಿಸಿದ ಹಸುವಿಗೆ ಶ್ರೀಮಂತ ಪಾಟೀಲರು ಪೂಜೆ ನೆರವೇರಿಸಿ ಬಾಳೆಹಣ್ಣು, ನೈವೇದ್ಯ, ಸುಗ್ರಾಸ ಮೊದಲಾದ ಆಹಾರ ಪದಾರ್ಥಗಳನ್ನು ತಿನ್ನಿಸಿದರು.

 

ಈ ಸಮಯದಲ್ಲಿ ಕೆಎಂಎಫ್ ನಿರ್ದೇಶಕ ಅಪ್ಪಾಸಾಬ ಅವತಾಡೆ, ಹಿರಿಯ ಮುಖಂಡರಾದ ದಾದಾಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಅಧಿಕಾರಿ ಜೆ.ಎ.ಹಿರೇಮಠ, ಆರ್.ಪಿ.ಅವತಾಡೆ, ಮಲ್ಲಿಕಾರ್ಜುನ ಮಗದುಮ, ಬಂಡು ಜಗತಾಪ, ರಮೇಶ ತೇಲಿ, ವಿಜಯ ಖನ್ನಿಕುಡೆ, ಅಮೀತ ಪಾಟೀಲ, ಸುಭಾಷ ಅಥಣಿ, ಸುಶೀಲ ಮಾಂಜರಿ, ರಾಮು ಸಡ್ಡಿ, ಪ್ರತಾಪ ಸಾತಪೂತೆ, ಸಂಜು ಸಾವಂತ, ಸುಧಾಕರ ಶೇಡಬಾಳೆ ಮೊದಲಾದವರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum