Belagavi News In Kannada | News Belgaum

ಕಿತ್ತೂರು ಕರ್ನಾಟಕ ಮರುನಾಮಕರಣ: ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಹರ್ಷ

🌐 Belgaum News :

 

ಅಥಣಿ: ಕರ್ನಾಟಕದ ಏಕೀಕರಣದ ನೆರೆಯ ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿರುವ ಕನ್ನಡಿಗರನ್ನು ಗಡಿನಾಡು ಕನ್ನಡಿಗರು ಮತ್ತು ನಮ್ಮ ಗಡಿಭಾಗದ ಪ್ರದೇಶವನ್ನು ಮುಂಬೈ ಕರ್ನಾಟಕ ಎಂದು ಕರೆಯಲಾಗುತ್ತಿತ್ತು,

ರಾಜ್ಯ ಸರ್ಕಾರ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ನಂತರ ಗಡಿನಾಡು ಬೆಳಗಾವಿ ಜಿಲ್ಲೆಯ ಕನ್ನಡಿಗರ ಆಗ್ರಹ ಪೂರ್ವಕ ಮನವಿ ಸ್ಪಂದಿಸಿದ ರಾಜ್ಯ ಸರಕಾರ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿರುವುದು ಸಂತಸ ತಂದಿದೆ. ಇತ್ತೀಚಿಗೆ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನುಡಿದಂತೆ ನಡೆದುಕೊಂಡು ಕಿತ್ತೂರು ಕರ್ನಾಟಕ ಎಂದು ಘೋಷಿಸಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಅಣ್ಣಾಸಾಬ ತೆಲಸಂಗ
ಹೇಳಿದರು.

ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎಂದೇ ಹೆಸರಾದ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡಿಗರ ಹೃದಯದಲ್ಲಿ ಮತ್ತು ಭಾರತೀಯ ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಪ್ರಪಂಚದ ಬಲಾಢ್ಯ ವಸಾಹ ತುಶಾಹಿ ಶಕ್ತಿಗೆ ಸವಾಲು ಹಾಕಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚುವ ಮೂಲಕ ಹಿರಿಮೆ ಮೆರೆದ ಸ್ವಾಭಿಮಾನದ ಬೀಡು ಕಿತ್ತೂರು ಸಂಸ್ಥಾನ.

ಇಂತಹ ಕಿತ್ತೂರು ಸಂಸ್ಥಾನದ ಹೆಸರನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟ ಈ ಭಾಗದ ಕನ್ನಡಿಗರ ಆಶಯದಂತೆ, ಕನ್ನಡಪರ ಹೋರಾಟಗಾರರ ಆಗ್ರಹದಂತೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಘೋಷಣೆ ಮಾಡಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಸರ್ಕಾರವನ್ನು ಅಭಿನಂದಿಸಿದರು.

ಈ ವೇಳೆ ಕರವೇ ಜಿಲ್ಲಾ ಸಂಚಾಲಕ ಜಗನ್ನಾಥ್ ಮಹಾಮನೆ, ಕಾರ್ಯದರ್ಶಿ ಶಂಕರ್ ಮಗದುಮ್, ಕುಮಾರ್ ಬಡಿಗೇರ್, ಉದಯ ಮಾಕಾಣಿ, ಸತೀಶ್ ಯಲ್ಲಟ್ಟಿ, ವಿಜಯ್ ಹುದ್ದಾರ್, ಸಿದ್ದು ಹಂಡಗಿ ಇನ್ನಿತರರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum