Belagavi News In Kannada | News Belgaum

ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರೊಂದಿಗೆ ಒಪ್ಪಂದ ವರ್ಣರಂಜಿತ ಕಾರ್ಯಕ್ರಮದಲ್ಲಿ ಅಥ್ಲೀಟ್‍ಗಳಿಗೆ ಸನ್ಮಾನ

🌐 Belgaum News :

ಬೆಳಗಾವಿ ನ.9-ಎಕ್ಸಾನ್ ಮೊಬಿಲ್ ಪ್ರೈವೇಟ್ ಲಿಮಿಟೆಡ್ ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ, ಮೀರಾಬಾಯಿ ಚಾನು ಮತ್ತು ಬಜರಂಗ್ ಪೂನಿಯಾ ಅವರೊಂದಿಗೆ ಮೊಬಿಲ್ ಇಂಡಿಯಾ ಹೊಂದಿರುವ ಬ್ರಾಂಡ್ ರಾಯಭಾರಿ ಒಪ್ಪಂದವನ್ನು ನವೀಕರಿಸುತ್ತಿರುವುದಾಗಿ ಕಂಪೆನಿಯ ಮುಂಚೂಣಿಯ ರಿಟೇಲ್ ಮಾರಾಟಗಾರರ ಸಮ್ಮುಖದಲ್ಲಿ ನವದೆಹಲಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು.

ಟೋಕಿಯೋ 2020 ಒಲಿಂಪಿಕ್ಸ್‍ನಲ್ಲಿ ಭಾರತ ಏಳು ಪದಕಗಳನ್ನು ಜಯಿಸುವುದರ ಮೂಲಕ ಅತ್ಯಂತ ಯಶಸ್ವಿ ಎನಿಸಿಕೊಂಡಿತ್ತು. ಭಾರತಕ್ಕೆ ಟ್ರ್ಯಾಕ್ ಆಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಮೊದಲ ಚಿನ್ನ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ಎರಡನೇ ಚಿನ್ನದ ಪದಕವನ್ನು ನೀರಜ್ ಚೋಪ್ರಾ ತಂದುಕೊಟ್ಟರೆ, ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಕಂಚಿನ ಪದಕ ಗೆದ್ದುಕೊಂಡ ಬಜರಂಗ್ ಪೂನಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‍ನಲ್ಲಿ ಮೂರು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಪರಿವರ್ತನೆಯ ಸಂಕೇತವಾಗಿ ಮತ್ತು ಸಾಮಾನ್ಯ ಹಿನ್ನೆಲೆಯಿಂದ ಬಂದು ಭಾರತವನ್ನು ಒಲಿಂಪಿಕ್ಸನಂಥ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ ಯಶಸ್ಸು ಈ ಎಲ್ಲ ಕ್ರೀಡಾಪಟುಗಳ ನಡುವೆ ಇರುವ ಸಾಮ್ಯತೆಯಾಗಿದೆ.

ಈ ಕುರಿತು ಮಾತನಾಡಿದ ಎಕ್ಸಾನ್ಮೊಬಿಲ್ ಲೂಬ್ರಿಕೆಂಟ್ಸ್‍ನ ಸಿಇಒ ದೀಪಂಕರ್ ಬ್ಯಾನರ್ಜಿ , ನೀರಜ್ ಚೋಪ್ರಾ, ಮೀರಾಬಾಯಿ ಚಾನು ಮತ್ತು ಬಜರಂಗ ಪೂನಿಯ ಅವರೊಂದಿಗೆ ನಮ್ಮ ಬ್ರಾಂಡ್ ಸಂಬಂಧವನ್ನು ನವೀಕರಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ.
ಈ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುವ ಮೊದಲೇ ನಾವು ಅವರೊಂದಿಗೆ ಗುರುತಿಸಿಕೊಂಡಿದ್ದೆವು. ಹಾಗಾಗಿ ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ವಿವಿಧ ಪ್ರಶಸ್ತಿ ಮತ್ತು ಒಲಿಂಪಿಕ್ಸಗಳಲ್ಲಿ ಪದಕ ಗೆದ್ದಾಗ ನಮಗೆ ಬಹಳ ಖುಷಿಯಾಗುತ್ತದೆ ಎಂದರು.

ಎಕ್ಸಾನ್ಮೊಬಿಲ್ ಲೂಬ್ರಿಕೆಂಟ್ಸ್‍ನ ಕನ್ಸೂಮರ್ ಮಾರ್ಕೆಟಿಂಗ್, ಮಾರ್ಕೆಟಿಂಗ್ ಡೆಪ್ಲಾಯ್ಮೆಂಟ್ ಜಿಎಂ ಇಮ್ತಿಯಾಜ್ ಅಹ್ಮದ್ ಮಾತನಾಡಿ, ಭಾರತಕ್ಕೆ ನಾವು ನೀಡಿದ ಬದ್ಧತೆಯ ಪ್ರಕಾರ ಈ ಮೂವರು ಚಾಂಪಿಯನ್‍ಗಳು ಫರಕ್ ಲಾಕರ್ ದೇಖಿಯೇ ಘೋಷಣೆಗೆ ಧ್ವನಿ ನೀಡಿದ್ದಾರೆ. ನಮ್ಮ ಕ್ಷಮತೆ, ನಾವೀನ್ಯತೆ ಮತ್ತು ಸಾಮಥ್ರ್ಯ ಮಾತ್ರವಲ್ಲ ನಾಳಿನ ಆಶಾವಾದದ ದಿನಗಳ ಕುರಿತು ಜನರಿಗೆ ಆತ್ಮವಿಶ್ವಾಸವನ್ನೂ ಇದು ಇಮ್ಮಡಿಗೊಳಿಸುತ್ತದೆ ಎಂದರು.

 

📱 Read Top News, Belgaum News Updates, Belagavi News in Kannada, Latest News on News Belgaum