Belagavi News In Kannada | News Belgaum

ಸೆಲ್ಪಿ ವಿಡಿಯೋ ಮಾಡಿ ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆ

🌐 Belgaum News :

ವಿಜಯನಗರ : ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಯುವಕೊಬ್ಬ ಸೆಲ್ಪಿ ವಿಡಿಯೋ ಮಾಡಿ ಕ್ರಿಮಿನಾಶಕ ಸೇವಿಸಿ ಇಂದು ಆತ್ಮಹತ್ಯಗೆ ಶರಣಾಗಿದ್ದಾರೆ.

ಮ್ಯಾಗಳಮನಿ ಪ್ರವೀಣ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಟುಂಬದ ಆಸ್ತಿ ಹಂಚಿಕೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರುವ ಗ್ರಾಮದ ಮುಖಂಡರಾದ ಅಕ್ಕಿ ತೋಟೇಶ್, ಬಾಚಿನಹಳ್ಳಿ ಆನಂದ ಮತ್ತು ತಂಬ್ರಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಅವರು ಕಿರುಕುಳ ನೀಡಿದ್ದಾರೆ ಎಂದಿದ್ದಾನೆ.

ಕೈಯಲ್ಲಿ ಕ್ರಿಮಿನಾಶಕ ಬಾಟಲಿ ಕೈಯಲ್ಲಿ ಹಿಡಿದುಕೊಂಡು ಪ್ರವೀಣ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಮೂವರು ವಿರುದ್ಧ ಅಶ್ಲೀಲ ಮಾತುಗಳನ್ನು ಆಡಿದ್ದಾರೆ. ಈ ಕುರಿತು ಮುಖಂಡ ಅಕ್ಕಿ ತೋಟೇಶ್ ಪ್ರವೀಣ್ ಆರೋಪವನ್ನು ತಳ್ಳಿ ಹಾಕಿದ್ದಾನೆ.////

📱 Read Top News, Belgaum News Updates, Belagavi News in Kannada, Latest News on News Belgaum