Belagavi News In Kannada | News Belgaum

ಸ್ವಾತಂತ್ರ್ಯ ಚಳುವಳಿ ಕುರಿತು ವಿವಾದಾತ್ಮಕ ಹೇಳಿಕೆ : ನಟಿ ಕಂಗನಾ ರಣಾವತ್ ವಿರುದ್ಧ FIR

🌐 Belgaum News :

ಹೊಸದಿಲ್ಲಿ: ಬಾಲಿವುಡ್ ನಟಿ ಕಂಗಾನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧಆಕ್ರೋಶದ ಮಾತುಗಳು ಕೇಳಿ ಬಂದಿದ್ದು, ಅವರ ವಿರುದ್ಧ ದೂರು ಕೂಡ ದಾಖಲಾಗಿದೆ.

ಸಮಾವೇಶವೊಂದರಲ್ಲಿ ದೇಶದ್ರೋಹದ ಹೇಳಿಕೆ ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್ ಬ್ರಿಟಿಷರ ಆಳ್ವಿಕೆಯ ವಿಸ್ತರಣೆಯಾಗಿದೆ ಹಾಗೂ  ಭಾರತವು 2014 ರಲ್ಲಿ ತನ್ನ ‘ನೈಜ ಸ್ವಾತಂತ್ರ್ಯ’ವನ್ನು ಪಡೆದುಕೊಂಡಿತು. 1947 ರಲ್ಲಿ ಭಾರತ  ಪಡೆದುಕೊಂಡಿರುವುದು ಭಿಕ್ಷೆ ಆಗಿತ್ತು  ಎಂದು  ಸ್ವಾತಂತ್ರ್ಯ ಚಳವಳಿಯ ಕುರಿತು ಹೇಳಿಕೆ ನೀಡಿದ್ದರು. ರಣಾವತ್ ಹೇಳಿಕೆ 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.

TimesNowನಲ್ಲಿ ಕಂಗನಾ ರಣಾವತ್ ಅವರ ದೇಶದ್ರೋಹದ ಹಾಗೂ ಪ್ರಚೋದಿತ ಹೇಳಿಕೆಗಳಿಗಾಗಿ 504, 505 ಹಾಗೂ  124A ಅಡಿಯಲ್ಲಿ ಕ್ರಮಕ್ಕಾಗಿ ವಿನಂತಿಸುವ ಅರ್ಜಿಯನ್ನು ಮುಂಬೈ ಪೊಲೀಸರಿಗೆ ಸಲ್ಲಿಸಲಾಗಿದೆ. ಕೆಲವು ಕ್ರಮಗಳನ್ನು ನೋಡಲು ಆಶಿಸುತ್ತೇವೆ ಎಂದು ಪ್ರೀತಿ ಶರ್ಮಾ ಮೆನನ್ ಗುರುವಾರ ಟ್ವೀಟಿಸಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum