Belagavi News In Kannada | News Belgaum

ಹೆದ್ದಾರಿಗೆ ಜಮೀನು ವಶಕ್ಕೆ ವಿರೋಧ, ಬೆಂಕಿ ಹಚ್ಚಿಕೊಂಡ ರೈತ..!

🌐 Belgaum News :

ಬೆಳಗಾವಿ, ನ.11- ಅನ್ನದಾತರ ಆಕ್ರೋಶ ಭುಗಿಲೆದ್ದಿತ್ತು. ನಮ್ಮ ಭೂಮಿಯನ್ನು ನಮಗೆ ಬಿಟ್ಟುಕೊಡಿ ಎಂದು ರೈತರು ಗೋಗರೆಯುತ್ತಿದ್ದರು. ನಾವು ರಸ್ತೆಯನ್ನು ಮಾಡಿಯೇ ತೀರುತ್ತೇವೆ ಎಂದು ರೈತರ ಫಲವತ್ತಾದ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಲವಂತದಿಂದ ವಶಪಡಿಸಿಕೊಳ್ಳಲು ಮುಂದಾದಾಗ ಅಸಹಾಯಕರಾದ ಅನ್ನದಾತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾದರು.

 

ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ಬೆಳಗ್ಗೆ ನೂರಾರು ರೈತರು, ಮಹಿಳೆಯರು ತಮ್ಮ ಭೂಮಿ ಉಳಿಸಿಕೊಳ್ಳಲು ಪ್ರತಿಭಟಿಸತೊಡಗಿದರು.ಆದರೆ, ಬಲವಂತವಾಗಿ ಇವರನ್ನು ತೆರವುಗೊಳಿಸಲು ಮುಂದಾದಾಗ ಕೆಲವರು ಕುಡುಗೋಲು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು.

ಆಕಾಶ್ ಅನಗೋಳಕರ ಎಂಬ ರೈತ ನೋಡನೋಡುತ್ತಿದ್ದಂತೆ ಪೆಟ್ರೋಲ್ ಹಚ್ಚಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದರು. ಧಗಧಗನೆ ಉರಿಯುತ್ತಿದ್ದ ಆತನನ್ನು ಅಲ್ಲಿದ್ದ ರೈತರು, ಪೊಲೀಸರು ಕಾಪಾಡಿ ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೈತರ ಮೇಲೆ ಪೊಲೀಸರಿಂದ ಪ್ರಹಾರ ನಡೆಸಿದಾಗ ನೊಂದ ರೈತರು ಜೀವ ಕೊಟ್ಟೇವು ಜಮೀನು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆಗೆ ಯತ್ನಿಸಿದರೆ ಮತ್ತೊಬ್ಬ ರೈತ ಮರ ಏರಿ ಕುಡುಗೋಲು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ ಘಟನೆಯೂ ನಡೆಯಿತು.

 

ಫಲವತ್ತಾದ ಜಮೀನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಮಚ್ಚೆ ಅಲಗ ಬೈಪಾಸ್ ರಸ್ತೆಗೆ ಸರ್ವೆ ಆದ ಜಮೀನು ಬಿಟ್ಟು ಬೇರೆ ಜಮೀನನ್ನು ಪಡೆಯಲಾಗುತ್ತಿದೆ. ಇದನ್ನು ನಾವು ತೀವ್ರವಾಗಿ ವಿರೋಧ ಮಾಡುತ್ತಿದ್ದೇವೆ ಎಂದು ಮಹಿಳಾ ರೈತರು ಕೂಡ ಭೂ ಸ್ವಾೀನಕ್ಕೆ ಅಡ್ಡಿಪಡಿಸಿದರು.

 

ಈ ಸಂದರ್ಭದಲ್ಲಿ ಪೊಲೀಸರು ಮಹಿಳೆಯರನ್ನು ವಶಕ್ಕೆ ಪಡೆದರು. ಒಟ್ಟಾರೆ ಬೆಳಗಾವಿಯ ಮಚ್ಚೆ ಗ್ರಾಮ ಇಂದು ರಣಾಂಗಣವಾಗಿತ್ತು.ಹೆದ್ದಾರಿ ಪ್ರಾಧಿಕಾರದ ದಬ್ಬಾಳಿಕೆಯನ್ನು ವಿವಿಧ ರೈತಪರ ಸಂಘಟನೆಗಳು ಖಂಡಿಸಿವೆ.

 

ಪ್ರಾvಕಾರ ಹಾಗೂ ಪೊಲೀಸರ ಈ ವರ್ತನೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆಗಳು ಹೇಳಿವೆ. ಯಾವುದೇ ರೀತಿಯ ಮುನ್ಸೂಚನೆ ಕೊಡದಂತೆ ಏಕಾಏಕಿ ಫಲವತ್ತಾದ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದ ರಾಷ್ಟ್ರೀಯ ಪ್ರಾಧಿಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಸರ್ವೆ ಮಾಡಿದ ಜಾಗ ಬೇರೆ. ಈಗ ವಶಪಡಿಸಿಕೊಳ್ಳುತ್ತಿರುವ ಜಮೀನು ಬೇರೆ. ಇದನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂದು ಮಚ್ಚೆ ಗ್ರಾಮದ ರೈತರು ಹೇಳಿದ್ದಾರೆ.

ಘಟನೆ ವಿರೋಧಿಸಿ ಆಕಾಶ್ ಆತ್ಮಹತ್ಯೆ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಾಣಕ್ಕೆ ಏನಾದರೂ ಹೆಚ್ಚುಕಡಿಮೆಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

//

📱 Read Top News, Belgaum News Updates, Belagavi News in Kannada, Latest News on News Belgaum