Belagavi News In Kannada | News Belgaum

ಮಕ್ಕಳ ದಿನಾಚರಣೆ : ನೆಹರು ಮನೆತನ ಸರ್ವಸ್ವವನ್ನು ರಾಷ್ಟ್ರಕ್ಕಾಗಿ ಧಾರೆ ಎರೆಯಿತು.

🌐 Belgaum News :

ಜವಹರಲಾಲ ನೆಹರು 14-11-1989 ರಲ್ಲಿ ಅಲಹಾಬಾದಿನಲ್ಲಿ ಜನಿಸಿದರು. ತಂದೆ ಮೋತಿಲಾಲ್ ನೆಹರು ತಾಯಿ ಸ್ವರೂಪರಾಣಿ ಪತ್ನಿ ಕಮಲಾದೇವಿ ಮಗಳು ಇಂದಿರಾಗಾಂಧಿ.
ಇವರ ಪ್ರಾಥಮಿಕ ಶಿಕ್ಷಣ ಮನೆಯಲ್ಲಿಯೇ ಆಯಿತು ಹಾಗೂ ಇಂಗ್ಲೆಂಡಿನ ಪ್ರತಿಷ್ಠಿತ ಪಬ್ಲಿಕ್ ಶಾಲ್ ಹ್ಯಾರೋ ನಂತರ ಕೇಂಬ್ರಿಡ್ಜನ ಟ್ರಿನಿತ ಕಾಲೇಜುಗಳಲ್ಲಿ ನಂತರ ಲಂಡನ್ನಿನಲ್ಲಿದ್ದು ನ್ಯಾಯಶಾಸ್ರ್ತ ಅಭ್ಯಸಿಸಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು ಹಾಗೂ ಪ್ರಸಿದ್ದ ವಕೀಲರಾದರು.
ಇವರು ಉತ್ತಮ ಈಜು ಪಟು ಸಹ ಆಗಿದ್ದರು. ನವೆಂಬರ 14 ರಂದು ನಮ್ಮ ದೇಶದಲ್ಲಿ ಮಕ್ಕಳ ದಿನಾಚರಣೆ ಎಂದು ಆಚರಿಸುತ್ತೇವೆ. ಜವಾಹರಲಾಲರಿಗೆ ಚಿಕ್ಕ ಮಕ್ಕಳನ್ನ ಕಂಡರೆ ಬಹಳ ಇಷ್ಟ ಅವರು ಚಿಕ್ಕ ಮಕ್ಕಳ ಪ್ರೀತಿಯ ಚಾಚಾ ನೆಹರು ಆಗಿದ್ದರು ಆದ್ದರಿಂದ ತಮ್ಮ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಬೇಕೆಂದು ತಿಳಿಸಿದರು. ಅದರಂತೆ ಪ್ರತಿ ವರ್ಷ ಇದೇ ದಿನದಂದು ನಮ್ಮ ದೇಶದಲ್ಲಿ “ಮಕ್ಕಳ ದಿನಾಚರಣೆ”ಯನ್ನು ಆಚರಿಸುತ್ತೇವೆ.

ಇವರು ಪೂರ್ವಜರು ಕಾಶ್ಮೀರದವರು ಇವರ ಮನೆತನದ ಹೆಸರು ಕೌಲ್ 1716 ರಲ್ಲಿ ದೆಹಲಿಗೆ ವಲಸೆ ಬಂದಿದ್ದರು. ಅವರು ಕಾಲುವೆಯ (ನೆಹರ್) ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದದರಿಂದ ಅವರ ಹೆಸರು ನೆಹರು ಸೇರಿಕೊಂಡು ನೆಹರು ಹೆಸರಿನಿಂದ ಪರಿಚಿತರಾದರು. ಕ್ರಮೇಣ ಕೌಲ ಎಂಬ ಮನೆತನದ ಹೆಸರು ಅಳಿಸಿ ಹೋಗಿ ನೆಹರು ಎಂಬುದೇ ಮನೆತನದ ಹೆಸರಾಗಿ ಉಳಿಯಿತು.

ನೆಹರು ಅವರು ಲಂಡನದಿಂದ ಭಾರತಕ್ಕೆ ಮರಳಿದ ನಂತರ ಪರತಂತ್ರ ಭಾರತದ ದಲಿತ ಕೋಟೆಯ ವಕಾಲತ್ತು ವಹಿಸಿ ಪರಕೀಯ ಸರಕಾರದಿಂದ ನ್ಯಾಯ ಪಡೆಯುವ ಹೋರಾಟಗಾರರಾದರು. ನಮ್ಮ ದೇಶವನ್ನು ಸ್ವತಂತ್ರಗೊಳಿಸಲು ಹೋರಾಡಿದ್ದರು. ಅನೇಕ ಬಾರಿ ಸೆರೆಮನ್ ವಾಸವನ್ನು ಅನುಭವಿಸಿದ್ದರು. ಮುಂದೆ ಗಾಂಧೀಜಿಯವರ ಪ್ರಭಾವದಿಂದ ನೆಹರು ಮನೆತನ ಸರ್ವಸ್ವವನ್ನು ರಾಷ್ಟ್ರಕ್ಕಾಗಿ ಧಾರೆ ಎರೆಯಿತು.

ಜವಹರಲಾಲರು ಬುದ್ದಿಜೀವಿ ವಿಚಾರವೆತ್ತ ಜಾಗತಿಕ ದೃಷ್ಠಿಕೋನವಿದ್ದವರು. ಅವರು ವಾಗ್ಮಿ ಅಲ್ಲದಿದ್ದರೂ ಅವರ ಮಾತು ನೇರ ಮಾತು ದೀರ ನಿಲುವು ಸುಲಭವಾಗಿ ಅವರನ್ನು ಭಾರತೀಯರ ಆರಾಧ್ಯ ಮೂರ್ತಿಯಾಗಿ ಮಾಡಿದ್ದವು. ಅವರ ಎಲ್ಲ ವಿಚಾರಗಳು ಗಾಂಧೀಜಿಗೆ ಒಪ್ಪಿಗೆಯಾಗುತ್ತಿರಲಿಲ್ಲ ಆದರೂ ಮಹಾತ್ಮರು ಜವಹರಲಾಲ ತಮ್ಮ ಉತ್ತರಾಧಿಕಾರಿ ಎಂದು ಸಾರಿದರು.
ಅವರು ಅಧ್ಯಕ್ಷತೆ ವಹಿಸಿದ ಅಖಿಲಭಾರತ ಕಾಂಗ್ರೆಸ್ಸಿನ ಲಾಹೋರ ಅಧಿವೇಶನ (1929) ಪೂರ್ಣ ಸ್ವಾತಂತ್ರ್ಯ ಗುರಿ ಎಂದು ಸಾರಿತು ದೀನ ದಲಿತರ ಕಲ್ಯಾಣಕ್ಕಾಗಿ ಸಮತಾವಾದವೇ ಮದ್ದು ಎಂಬುದು ಜವಹರಲಾಲರಿಗೆ ಮನವರಿಕೆಯಾಗಿತ್ತು. ಆ ವಿಚಾರವನ್ನು ಜನರ ನಡುವೆ ಅವರು ಪ್ರಚಾರಗೊಳಿಸಿದರು.

ಸುದೀರ್ಘ ಹೋರಾಟದ ಬಳಿಕ 1947 ರ ಅಗಸ್ಟ 15 ಭಾರತ ಸ್ವತಂತ್ರವಾದಾಗ ಜವಹರಲಾಲರು ಪ್ರಥಮ ಪ್ರಧಾನ ಮಂತ್ರಿಯಾದರು. 15-08-1947 ರಿಂದ 27-1964 ರವರೆಗೆ 6131 ದಿನಗಳು ರಾಷ್ಟ್ರ ನೌಕೆಯನ್ನು ನಡೆಸಿದರು.

ಇವರು ಪ್ರಧಾನ ಮಂತ್ರಿಗಳಾದ ನಂತರ ರಾಷ್ಟ್ರೀಯ ಯೋಜನಾ ಆಯೋಗ ರಚಿಸಿದರು. 1952 ರಲ್ಲಿ ಪಂಚವಾರ್ಷಿಕ ಯೋಜನೆಗಳ ಸರಣಿಯಲ್ಲಿ ಮೊದಲ ಯೋಜನೆ ಪ್ರಾರಂಭವಾಯಿತು. ಇವರ ಜೀವಿತ ಕಾಲದಲ್ಲಿಯೇ 2 ನೇ ಮತ್ತು 3 ನೇ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಇದರಿಂದಾಗಿ ಉಕ್ಕಿನ ಕಾರ್ಖಾನೆಗಳು, ಎಣ್ಣೆ ಶುದ್ದೀಕರಣ ಕೇಂದ್ರಗಳು, ನೀರಾವರಿ ಮತ್ತು ವಿದ್ಯುದಾಗರಗಳು ಅಸ್ತಿತ್ವಕ್ಕೆ ಬಂದವು. ಇವೇ ನಮ್ಮ ಹೊಸ ದೇವಾಲಯಗಳು, ಆಧುನಿಕ ತೀರ್ಥ ಯಾತ್ರಾ ಸ್ಥಳಗಳು ಎಂದು ಹೇಳಿದರು.

ಬೃಹತ್ ಭಾಕ್ರಾ ಸಾಗರ ಉದ್ಘಾಟಿಸುತ್ತಾ ಎಲ್ಲಿ ಮಾನವ, ಮಾನವನ ಕಲ್ಯಾಣಕ್ಕಾಗಿ ದುಡಿಯುವನೋ ಅದೇ ಅತಿ ದೊಡ್ಡ ದೇವಸ್ಥಾನ, ಮಸೀದಿ ಮತ್ತು ಗುರುದ್ವಾರ ಇಲ್ಲಿ ಸಹಸ್ರಾರು ಜನ ದುಡಿದಿದ್ದಾರೆ. ತಮ್ಮ ಬೆವರು ರಕ್ತ ಹರಿಸಿದ್ದಾರೆ ಮತ್ತು ಪ್ರಾಣ ಅರ್ಪಿಸಿದ್ದಾರೆ. ಈ ಭಾಕ್ರಾನಂಗಲ್‍ಗಿಂತ ಉತ್ತಮ ಸ್ಥಳ ಯಾವುದಿದೆ? ಎಂದು ಹೇಳಿದರು.

ಜಮೀನ್ದಾರಿ ಅಳಿಯಿತು ಕೃಷಿ ಕಾರ್ಮಿಕರಿಗೆ ರಕ್ಷಣೆ ದೊರೆಯಿತು. ಮತ್ತು ಹೆಚ್ಚುವರಿ ಜಮೀನು ಭೂ-ಹೀನರಿಗೆ ಹಂಚಿಕೆ ಆಯಿತು. ಸಮುದಾಯ ಅಭಿವೃದ್ದಿ ಯೋಜನೆ ಪ್ರಾರಂಭಿಸಿದರು. ಇದರಿಂದ ಜನರು ತಮ್ಮ ಹಳ್ಳಿಗಳ ಸ್ಥಿತಿಗತಿಗಳನ್ನು ಸುಧಾರಿಸಲು ತಮ್ಮ ಸಮಯವನ್ನು ವಿನಿಯೋಗಿಸಿ ಪ್ರಯತ್ನಿಸಲು ಅಕಾಶ ದೊರಕಿಸಿಕೊಟ್ಟರು. ಸ್ಥಳಿಯ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳಲು ಅನುಕೂಲವಾಗುವಂತೆ ಪಂಚಾಯತ್ ರಾಜ್ ವ್ಯವಸ್ಥೆ ಕಾರ್ಯ ರೂಪಕ್ಕೆ ತಂದರು.

ಭಾರತದ ರೈತರು ಟ್ರ್ಯಾಕ್ಟರ್ ಮತ್ತಿತರ ಆಧುನಿಕ ಉಪಕರಣಗಳನ್ನು ಉಪಯೋಗಿಸಲು ಉತ್ತೇಜನ ಕೊಟ್ಟರು, ದೇಶದ ಅಭಿವೃದ್ದಿಗೆ ಕೈಗಾರಿಕೆ ವೈಜ್ಞಾನಿಕ ಪ್ರಗತಿ ಬಹಳ ಅವಶ್ಯಕವೆಂದು ತಿಳಿಸಿದ್ದರು. ನೆಹರೂರವರು ಉತ್ತಮ ಲೇಖಕರೂ ಆಗಿದ್ದರು, ಅವರ ಆತ್ಮಕಥೆ, ಜಗತ್ತಿನ ಚರಿತ್ರೆಯ ಇಣುಕು ನೋಟಗಳು, ಭಾರತ ದರ್ಶನ ಎಲ್ಲವೂ ಶ್ರೇಷ್ಠ ಕೃತಿಗಳಾಗಿವೆ. ಹವ್ಯಾಸ ಚೆಂಗುಲಾಬಿ ಪ್ರೀತಿಯ ಹೂ ಅವರ ಅವಿಶ್ರಾಂತ ದುಡಿಮೆ, ಶಿಸ್ತು, ಓರುಣ ಇತರಿಗೆ ಮಾದರಿ, ಇಂತಹ ರಾಷ್ಟ್ರ ನಾಯಕನ ನೆನಪಿಗಾಗಿ ಪ್ರತಿ ವರ್ಷ ಆಚರಿಸುವ ಮಕ್ಕಳ ದಿನಾಚರಣೆಯಂದು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮಕ್ಕಳು ಜೀವನದಲ್ಲಿ ಸಂಯಮ, ಸದಾಚಾರ, ಪ್ರೇಮ, ಸಹಿಷ್ಣುತೆ, ನಿರ್ಧಯತೆ, ಪವಿತ್ರತೆ, ದೃಢ ಆತ್ಮವಿಶ್ವಾಸ ಮತ್ತು ಉತ್ತಮ ಸ್ನೇಹ ಸಂಪಾದಿಸಬೇಕು. ವಿದ್ಯೆ, ಶೂರತೆ, ದಕ್ಷತೆ ಮತ್ತು ಬಲ ಧೈರ್ಯ ಇವುಗಳನ್ನು ಸಂಪಾದಿಸಬೇಕು.

ಇಂತಹ ಭವ್ಯ ಭಾರತದ ಕನಸನ್ನು ಕಂಡ ಜವಹರಲಾಲರು ಹೀಗೆ ಹೇಳಿದ್ದಾರೆ, ಮಕ್ಕಳೇ ದೇಶದ ಆಸ್ತಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಎನ್ನುತ್ತಿದ್ದ ಜವಾಹರಲಾಲ್ ನೆಹರೂರವರಂತಹ ಮಹಾನ್ ದೇಶ ಭಕ್ತನನ್ನು ಈ ದಿನ ನೆನಪಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ.

ಕವಿ ರವೀಂದ್ರರು ಒಮ್ಮೆ ಜವಾಹರಲಾಲರನ್ನು ಋತರಾಜ, ಮತ್ತು ಸಂತೋಷದ ರಾಜ ಎಂದು ಕರೆದಿದ್ದರು 1964 ನೇ 27 ರಂದು ನಿಧನ ಹೊಂದಿದರು.
ಎಂ.ವೈ. ಮೆಣಸಿನಕಾಯಿ

📱 Read Top News, Belgaum News Updates, Belagavi News in Kannada, Latest News on News Belgaum