Belagavi News In Kannada | News Belgaum

ಪ್ರಚಾರದ ಕೊರತೆಯಿಂದ ಬಸವಳಿಯುತ್ತಿರುವ ಮಾನವಂತರ ಮನೆತನ ನಾಟಕ ಪ್ರದರ್ಶನ

🌐 Belgaum News :
ಅಥಣಿ ಪಟ್ಟಣದಲ್ಲಿ ರಾಜು ತಾಳಿಕೋಟಿ ಒಡೆತನದ ಶ್ರೀ ಗುರಿ ಖಾಸ್ಗತೇಶ್ವರ ನಾಟಕ ಕಂಪನಿಯಲ್ಲಿ ಕಳೆದ ಎರಡು ದಿನಗಳಿಂದ ಕೆ ಮಹದೇವಯ್ಯ ಕೃತ ನಾಟಕ ಮಾನವಂತರ ಮನೆತನ ಕಳೆದ ಎರಡು ದಿನಗಳಿಂದ ಪ್ರದರ್ಶನವಾಗುತ್ತಿದೆ.ನಾಟಕದಲ್ಲಿ ಹಾಸ್ಯ ಪಾತ್ರಗಳಾದ ಚೆನ್ನಪ್ಪನ ಪಾತ್ರದಲ್ಲಿ ಕಿಟ್ಟು ಉಡುಪಿ,ಪ್ರಹ್ಲಾದನ ಪಾತ್ರದಲ್ಲಿ ಆನಂದ ಮುಧೋಳ,ಮತ್ತು  ಚೈತ್ರಾ ಕುಂದಾಪುರ, ಹಾಗೂ
 ಪ್ರಮುಖ ಪಾತ್ರಗಳಾದ ಮರಡಿ ಮಲ್ಲನ ಪಾತ್ರದಲ್ಲಿ ಮುನ್ನಾ ಕುಕನೂರ,ತ್ಯಾಗರಾಜನ ಪಾತ್ರದಲ್ಲಿ ದಾನೇಶ ಗದಗ ಸಿದ್ದಜ್ಜನ ಪಾತ್ರದಲ್ಲಿ ಉಮೇಶ್ ಮಹಾಲಿಂಗಪೂರ,ವಾಸುನ ಪಾತ್ರದಲ್ಲಿ ಕುಮಾರ ಶೆಡ್ಲಿಗಿ ಮತ್ತು ರಮಾಳ ಪಾತ್ರದಲ್ಲಿ ಮಂಜುಳಾ ಲೋಕಾಪೂರ,ಮತ್ತು ಗೀತಾಳ ಪಾತ್ರದಲ್ಲಿ ಸಂಘದ ಸಂಚಾಲಕಿ ಪ್ರೇಮಾ ತಾಳಿಕೋಟಿ ನಟಿಸುತ್ತಿದ್ದು ಹಿನ್ನೆಲೆ ಸಂಗೀತವನ್ನು  ವಿಜಯಪುರದ ಜಯ ಹಾಗೂ ರಾಮ್ ಶೆಟ್ಟಿ(ಪಾಪು) ಪ್ರಚಾರ ಹಾಗೂ ಬೆಳಕಿನ ವ್ಯವಸ್ಥೆಯನ್ನು ವೀರಭದ್ರ ಗೂಗಿ ಮಾಡಿದ್ದು ಸಂಸ್ಥೆಯ ಮಾಲೀಕರಾದ ರಾಜು ತಾಳಿಕೋಟಿ ಅವರ ನಿರ್ದೇಶನದ ಮಾನವಂತರ ಮನೆತನ ನಾಟಕ ರಾಜ್ಯಾದ್ಯಂತ ಈ ಮೊದಲು ನೂರು ದಿನಗಳಿಗೂ ಅಧಿಕ ಜನಭರಿತವಾಗಿ ಯಶಸ್ವಿ ಪ್ರಯೋಗ ಕಂಡಿದ್ದರೂ ಕೂಡ ಸದ್ಯ ಕಲಾಭಿಮಾನಿಗಳ ಕೊರತೆ ಎದ್ದು ಕಾಣುತ್ತಿದೆ.
ಸಕ್ಕರೆ ಕಾರ್ಖಾನೆಗಳು ಆರಂಭವಾದ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನ ಕೆಲಸಗಳಲ್ಲಿ ತೊಡಗಿಕೊಂಡಿರುವದು ಒಂದು ಕಡೆಯಾದರೆ ಇನ್ನೊಂದು ಕಡೆ ಅಧುನಿಕ ತಂತ್ರಜ್ಞಾನದ ಬಹುಕೋಟಿ ಬಜೆಟ್ಟಿನ ಸಿನೆಮಾಗಳು,ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾಟಕಗಳ ಲಭ್ಯತೆಯಿಂದಾಗಿ ಜನರು ನಾಟಕ ಮಂದಿರಗಳತ್ತ ಬರದೆ ಇರುವದರಿಂದ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ.
ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ನಾಟಕ ಪ್ರದರ್ಶನವಾಗದೆ ಕಲೆಯನ್ನೇ ನಂಬಿ ಬದುಕುತ್ತಿದ್ದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು ಒಂದು ಕಡೆಯಾದರೆ ಸದ್ಯ ನುರಿತ ಕಲಾವಿದರ ಅತ್ಯುತ್ತಮ ನಟನೆಯ ನಡುವೆಯೂ ಕಲಾಭಿಮಾನಿಗಳ ಕೊರತೆಯಿಂದ ಸೊರಗುತ್ತಿದ್ದು ನಾಟಕ ನೋಡಿದವರು ಮತ್ತಷ್ಟು ಜನರಿಗೆ ಅದರ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವಂತೆ ಮಾಡಬೇಕು ಎಂದು ಸಂಘದ ವ್ಯವಸ್ಥಾಪಕರಾದ ಭೀಮಾಶಂಕರ ಅವರು ಅಥಣಿ ತಾಲೂಕಿನ ಕಲಾ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
📱 Read Top News, Belgaum News Updates, Belagavi News in Kannada, Latest News on News Belgaum