Belagavi News In Kannada | News Belgaum

ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿ

🌐 Belgaum News :

ಬೆಳಗಾವಿ : ಗೋಕಾಕ ತಾಲ್ಲೂಕಿನ ಕೊಣ್ಣೂರ- ಸಾವಳಗಿ ಹೋಗುವ ರಸ್ತೆ ಮಧ್ಯೆದಲ್ಲಿ ಇರುವ ರೈಲ್ವೆ ಸೇತುವೆ ಕೆಳಗೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಇಂದು ಉರುಳಿ ಬಿದ್ದಿದೆ.

ಬೆಳಗಿನ ಜಾವ ಸಕ್ಕರೆ ಕಾರ್ಖಾನೆಗೆ ಎರಡು ಟೇಲರ್ ಗಳ ಮೂಲಕ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ರೈಲ್ವೆ ಬ್ರಿಜ್ ಕೆಳಗಿ ಪಲ್ಟಿ ಹೊಡೆದಿದೆ. ಇದರಿಂದ ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಬೆಳಗಾವಿ, ಗೋಕಾಕ ಸೇರಿದಂತೆ ಈ ಮಾರ್ಗವಾಗಿ ತೆರಳುವ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಯಿತು. ಕಿ.ಮೀ ಗಂಟಲೇ ವಾಹನಗಳು ನಿಂತಿದ್ದವು.

ಬಳಿಕ ಜೆಸಿಬಿ ಮೂಲಕ ಉರುಳಿದ ಟೇಲರ್ ಮೇಲಕ್ಕೆ ಎತ್ತಿ ರಸ್ತೆ ಸಂಚಾರ ತೆರವುಗೊಳಿಸಲಾಯಿತು. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ./////

📱 Read Top News, Belgaum News Updates, Belagavi News in Kannada, Latest News on News Belgaum