Belagavi News In Kannada | News Belgaum

MLC ಚುನಾವಣೆಯಲ್ಲಿ ನಾವು 20 ಸಾವಿರ ಕೊಟ್ರೆ, ಅವರು 40-50 ಸಾವಿರದವರೆಗೆ ಕೊಟ್ಟು ಗೆದ್ರು : ಜೆಡಿಎಸ್ ಶಾಸಕ ಶಿವಲಿಂಗೇಗೌಡ

🌐 Belgaum News :

ಹಾಸನ : ಕಳೆದ ಬಾರಿ ಎಂಎಲ್ ಸಿ ಚುನಾವಣೆಯಲ್ಲಿ ಹಣ ಹಂಚಿರುವುದರ ಬಗ್ಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ನಗರದಲ್ಲಿ ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಶಾಸಕರು, ಮುಖಂಡರು ಮತ್ತು ಸಂಸದರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು ದೇವೇಗೌಡರ ಸಮ್ಮುಖದಲ್ಲಿ ಸಭೆ ಅಂದ್ಕೊಂಡಿದ್ದೆ. ಆದರೆ ಹೀಗೆ ಸಭೆ ಅಂದಿದ್ರೆ ನಾನು ಬರ್ತಾನೆ ಇರ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಶಿವಲಿಂಗೇಗೌಡರ ಕಾರಣದಿಂದ ಪಟೇಲ್ ಶಿವರಾಂ ಸೋತರು, ಕಾಂಗ್ರೆಸ್‌ನ ಗೋಪಾಲಸ್ವಾಮಿ ಜಯಗಳಿಸಿದ್ರು ಅಂತ ನನ್ನ ಮೇಲೆ ಆರೋಪಗಳು ಕೇಳಿ ಬಂದವು. ಆದರೆ ನನ್ನ ಹೆತ್ತತಾಯಿ ಮೇಲಾಣೆ. ನಾನು ಮೋಸಗಾರ ಅಲ್ಲ. ನಾವು 20 ಸಾವಿರ ಕೊಟ್ಟರೆ ಅವರು 40, 50 ಸಾವಿರದವರೆಗೆ ಕೊಟ್ಟು ಗೆದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಹಣ ಹಂಚಿರುವ ಕುರಿತು ಸುಳಿವು ನೀಡಿದರು.

ನೀವು ಏನಾದ್ರು ಅಂದುಕೊಳ್ಳಿ ನಾನು ನೇರವಾಗೇ ಹೇಳ್ತೀನಿ ಎಂದು ಮಾತಿಗಿಳಿದ ಶಾಸಕರು, ದೇವೇಗೌಡರ ಹಾಗು ಕುಮಾರಸ್ವಾಮಿ ಹೆಸರು ಹೇಳಿದಂತೆ ಓಡಿ ಬಂದು ಮತ ಹಾಕೋರು ಯಾರೂ ಇಲ್ಲ. ದೇವೇಗೌಡರ ಕುಮಾರಸ್ವಾಮಿ ಹೆಸರು ಹೇಳಿದ ಕೂಡಲೇ ಮತ ಬರಲ್ಲ ಎಂದು ಗರಂ ಆಗಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum