Belagavi News In Kannada | News Belgaum

ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ಗ್ರಾಪಂ.ಸದಸ್ಯ : ಮುಂದುವರೆದ ಕಾರ್ಯಾಚರಣೆ

🌐 Belgaum News :

ಚಿಕ್ಕಬಳ್ಳಾಪುರ : ಬೈಕ್ ಸಮೇತ ಗ್ರಾಮ ಪಂಚಾಯ್ತಿ ಸದಸ್ಯ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ರಾಮಪಟ್ಟಣ-ನವಿಲುಗುರ್ಕಿ ಗ್ರಾಮದ ಬಳಿ ಇರುವ ಯದಾರ್ಲಹಳ್ಳಿ ಬ್ರಿಡ್ಜ್​ ಬಳಿ ಶುಕ್ರವಾರ ಸಂಜೆ ನಡೆದಿದೆ.

ವಿಪರೀತ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿವೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಗಂಗಾಧರ್ (45) ಕೊಚ್ಚಿ ಹೋಗಿದ್ದಾನೆ.

ಹಳ್ಳದಲ್ಲಿ ಕೊಚ್ಚಿಹೋದ ಗ್ರಾಮ ಪಂಚಾಯತ್ ಸದಸ್ಯ ಶನಿವಾರ ಬೆಳಗ್ಗೆಯೂ ಪತ್ತೆಯಾಗದ ಕಾರಣ ಶೋಧ ಕಾರ್ಯಕ್ಕೆ ಎನ್ ಡಿಆರ್ ಎಫ್ ತಂಡ ಕಳಿಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ. ತುಂಬಿ ಹರಿಯುತ್ತಿರುವ ಸೇತುವೆ ಬಳಿ ಗಂಗಾಧರ್ ಬೈಕ್ ಪತ್ತೆಯಾಗಿದೆ. ಆದರೆ ಗಂಗಾಧರ ಮಾತ್ರ ಇನ್ನೂ ಪತ್ತೆಯಾಗಿಲ್ಲ./////

📱 Read Top News, Belgaum News Updates, Belagavi News in Kannada, Latest News on News Belgaum