Belagavi News In Kannada | News Belgaum

ಬಿಟ್ ಕಾಯಿನ್ ಹಗರಣದ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪಕ್ಕೆ‌ ಮುಖ್ಯಮಂತ್ರಿ ಪ್ರತಿಕ್ರಿಯೆ

🌐 Belgaum News :

ಬೆಂಗಳೂರು:ರಾಜ್ಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ ಜೋರಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.ಕಾಂಗ್ರೆಸ್ ನಾಯಕರಿಂದ ಬೇಸ್ ಲೆಸ್ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.ಈಗಾಗಲೇ ರಾಜ್ಯ ಸರ್ಕಾರ ED ತನಿಖೆಗೆ ಈ ಪ್ರಕರಣವನ್ನು ಕೊಟ್ಟಾಗಿದೆ.ಆದರೆ ಈ ಪ್ರಕರಣವನ್ನು ಕಾಂಗ್ರೆಸ್ ನಾಯಕರು ಯಾವ ಆಧಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಒಬ್ಬೊಬ್ಬ ನಾಯಕ ಒಂದೊಂದು ಸಂಖ್ಯೆಗಳನ್ನು ಹೇಳ್ತಿದ್ದಾರೆ.ಒಬ್ಬರು 2000 ಅಂದರೆ, ಇನ್ನೊಬ್ಬರು 3000 ಅಂತಿದ್ದಾರೆ.ಇದರಲ್ಲಿ ಯಾವುದು ಸತ್ಯಾಂಶ ಎಂದು ಕಾಂಗ್ರೆಸ್ ನಾಯಕರೇ ಹೇಳಬೇಕು.ಪ್ರತಿದಿನ ಆಧಾರರಹಿತ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ನನಗೆ ಆಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.ಬಿಟ್ ಕಾಯಿನ್ ಆರೋಪದ ಕುರಿತಾಗಿ ನನಗೆ ಯಾವ ಭಯಾನೂ ಇಲ್ಲ ಎಂದಿದ್ದಾರೆ.

 

📱 Read Top News, Belgaum News Updates, Belagavi News in Kannada, Latest News on News Belgaum