Belagavi News In Kannada | News Belgaum

ಗುತ್ತಿಗೆದಾರರ ನಿರ್ಲಕ್ಷ್ಯ; ನಿರ್ವಹಣೆ ಕೊರತೆಯಿಂದ ಹಗಲಿನಲ್ಲಿ ಉರಿದ ವಿದ್ಯುತ್‌ ದೀಪಗಳು

🌐 Belgaum News :

ಗುತ್ತಿಗೆದಾರರ ನಿರ್ಲಕ್ಷ್ಯ: ಸಂಜೆ ಆಗುತ್ತಲೇ ಬೀದಿ ದೀಪಗಳು ಬೆಳಗುವಂತೆ ನೋಡಿಕೊಳ್ಳುವುದು ನಿಯಮ. ಆದರೆ, ಕೊಣ್ಣೂರಿನಲ್ಲಿ  ಹಗಲಲ್ಲಿ ಬೆಳಗುತ್ತವೆ.  ಪುರಸಭೆ ಮತ್ತು ಹೆಸ್ಕಾಂ ಅಧಿಕಾರಿಗಳು  ಗಮನಿಸದಿರುವುದು ವಿಪರ್ಯಾಸದ ಸಂಗತಿ ಎಂಬುದು ಸಾರ್ವಜನಿಕರ ಅಭಿಪ್ರಾಯ. ಯಾಕೆಂದರೆ,  ಬೀದಿ ದೀಪಗಳ ವಿದ್ಯುತ್ ಬಿಲ್ಲನ್ನು ಸಾರ್ವಜನಿಕರಿಂದ ಕರದ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ.  ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ  ಹಣದ ಮಹತ್ವ ಗೊತ್ತಿಲ್ಲ, ಇದರ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

 

 

ನಿರಂತರ ಉರಿಯುವ ದೀಪಗಳು: ಕಳೆದು 10  ದಿನಗಳಿಂದ  ನಿರಂತರವಾಗಿ ಹಗಲಲ್ಲಿ ಬೀದಿ ದೀಪಗಳು ಉರಿಯುತ್ತಿವೆ. ಇವುಗಳನ್ನು ನೋಡಿ ಅನೇಕ ಸಲ ಪ್ರಜ್ಞಾವಂತ ನಾಗರಿಕರು ಅಧಿಕಾರಿಗಳಿಗೆ ತಿಳಿಸಿದರು ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum