Belagavi News In Kannada | News Belgaum

ಟಾಟಾಕೋಟಿ ಪರ್ವತ ಏರಿದ ಹಳ್ಳಿ ಹೈದಾ ಅಶೋಕ್

🌐 Belgaum News :

ವಿಜಯಪುರ : ಜಮ್ಮು-ಕಾಶ್ಮೀರದ ಪೇಹೆಲ್ಗೆಮ್ ನ 15,568 ಅಡಿ ಟಾಟಾಕೋಟಿ ಹಿಮ ಪರ್ವತವನ್ನು ಕೊಡ್ಲಿಗಿ ತಾಲ್ಲೂಕಿನ ಉಲ್ಲನಹಳ್ಳಿ ಗ್ರಾಮದ ಯುವಕ ಎಲ್. ಅಶೋಕ್ ಯಶಸ್ವಿಯಾಗಿ ಏರಿದ್ದಾರೆ.

ರಾಜ್ಯ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಆಯೋಜಿಸಿದ ಹಿಮಾಲಯದ ಮಹಾದಂಡ ಯಾತ್ರೆಯಲ್ಲಿ ಉಲ್ಲನಹಳ್ಳಿ ಗ್ರಾಮದ ಯುವಕ ಟಾಟಾಕೋಟಿ ಹಿಮ ಪರ್ವತ ಏರಿ ಸಾಧನೆಗೈದಿದ್ದಾನೆ.

ಕರ್ನಾಟಕದಿಂದ ಮೂವತ್ತೆಂಟು ಜನ ಸಾಹಸಿಗಳ ಆಯ್ಕೆಯಾಗಿದ್ದರು. ಈ ಪೈಕಿ ಎಲ್. ಅಶೋಕ್ ಕೂಡಾ ಒಬ್ಬರಾಗಿದ್ದರು. ಸೆ.21, 2021ರಿಂದ ಅ.11ರವೆಗೆ ಜಮ್ಮು ಮತ್ತು ಕಾಶ್ಮೀರದ ಪೇಹೆಲ್ಗೆಮ್ ನಲ್ಲಿ ನಡೆದ 10  ದಿನದ ಹಿಮಾಲಯದ ಮಹಾ ದಂಡೆಯಾತ್ರೆಯಲ್ಲಿ  20 ಕೆಜಿ ಮೌಂಟೇನ್ ಉಪಕರಣಗಳನ್ನು ಹೊತ್ತು  ಟಾಟಾಕೋಟಿ ಹಿಮಪರ್ವತ ಶಿಖರವನ್ನು ಏರಿದ್ದಾರೆ.

22 ಗಂಟೆಗಳ ಕಾಲ ನಿರಂತರವಾಗಿ ನಿದ್ರೆ ಊಟವಿಲ್ಲದೆ ಟಾಟಾಕೋಟಿ ಪರ್ವತದ ಶಿಖರವನ್ನು ಏರಿದ ಕರ್ನಾಟಕದ ಸಾಹಸಿಗಳ  ತಂಡದಲ್ಲಿ ಕೂಡ್ಲಿಗಿ ತಾಲ್ಲೂಕಿನ ಉಲ್ಲಾನಹಳ್ಳಿ ಗ್ರಾಮದ ಅಶೋಕ್ ಒಬ್ಬರಾಗಿದ್ದಾರೆ. ಅಶೋಕ ಪರ್ವತ ಏರುವ ಮೂಲಕ ಗೆಲುವಿನ ನಗೆ ಬಿರುದ್ದು ರಾಷ್ಟ್ರ ಧ್ವಜ ಹಾರಿಸಿದ್ದಾನೆ.

ಇವರ ಸಾಧನೆಗೆ, ಉಲ್ಲನಹಳ್ಳಿ ಗ್ರಾಮದ ಮುಖಂಡರು ಹಿರಿಯರು, ತಾಲೂಕಿನ ವಿವಿಧ ಪರ ಸಂಘಟನೆಗಳ  ಪದಾಧಿಕಾರಿಗಳು, ಜನಪ್ರತಿನಿಧಿಗಳು ಸ್ನೇಹಿತರು ಸೇರಿದಂತೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಗ್ರಾಮ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾ/////

📱 Read Top News, Belgaum News Updates, Belagavi News in Kannada, Latest News on News Belgaum