Belagavi News In Kannada | News Belgaum

ಕೌಟುಂಬಿಕ ಕಲಹ: ರೇಲ್ವೆ ಹಳಿಗೆ ತಲೆಕೊಟ್ಟು ಶಿಕ್ಷಕ ಆತ್ಮಹತ್ಯೆ

🌐 Belgaum News :

ಹೈದರಾಬಾದ್:  ಕೌಟುಂಬಿಕ ಕಲಹದಿಂದ ಬೇಸತ್ತು ಸರ್ಕಾರಿ ಶಾಲಾ ಶಿಕ್ಷಕನೊಬ್ಬ ರೇಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ಮೇದಕ್ ನಲ್ಲಿ ನಡೆದಿದೆ.

ಶಿವ್ವಂಪೇಟೆ ಮಂಡಲದ ಚಿನ್ನ ಗೊಟ್ಟಿಮುಕ್ಕಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ರಾಮರಾವ್ (43)  ಮೃತ  ವ್ಯಕ್ತಿ.

ಮೂಲತಃ ರಾಮರಾವ್ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಚಿಪುರುಪಲ್ಲಿ ಮಂಡಲದ ಅಕುಲಾಪೇಟ್ ಗ್ರಾಮದವರು.  ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ರಾಮರಾವ್ ಶನಿವಾರ ಬೆಳಗ್ಗೆ ವಿಜಯನಗರಕ್ಕೆ ತೆರಳಿದ್ದರು.ಆದರೆ,  ಶನಿವಾರ ರಾತ್ರಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಪತ್ನಿ ಚಿನ್ನ ಅಮ್ಮುಲು (37) ಮತ್ತು ಮಕ್ಕಳಾದ ಧನುಷ್(7)ಮತ್ತು ಪೂಜಾಶ್ರೀ (1) ಅವರೊಂದಿಗೆ ನರಸಾಪುರ ಪಟ್ಟಣದ ಶ್ರೀರಾಮನಗರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು  ಎನ್ನಲಾಗಿದೆ.

ನರಸಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum