Belagavi News In Kannada | News Belgaum

ವಿಧಾನ ಪರಿಷತ್‌ಗೆ ವಾಟಾಳ್‌ ನಾಗರಾಜ್ ಸ್ಪರ್ಧೆ

🌐 Belgaum News :

ರಾಮನಗರ: ಮೈಸೂರು-ಚಾಮರಾಜನಗರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

‘ಗ್ರಾಮ ಪಂಚಾಯಿತಿಗಳಿಗೆ ಬಲ ತುಂಬಲು, ಪಂಚಾಯಿತಿ ಸದಸ್ಯರಿಗೆ ಗೌರವ ತಂದು ಕೊಡುವ ಸಲುವಾಗಿ ಈ ಸ್ಪರ್ಧೆ’ ಎಂದು ಅವರು ಮೇಕೆದಾಟು ಯೋಜನೆಗೆ ಒತ್ತಾಯಿಸಿ
ಭಾನುವಾರ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಹೇಳಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮಪಂಚಾಯಿತಿಗಳೇ ಬುನಾದಿ. ಗ್ರಾಮ ಪಂಚಾಯಿತಿಗಳು ಕಲುಷಿತವಾಗಬಾರದು. ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬಬೇಕಾಗಿದೆ. ಸದಸ್ಯರಿಗೆ ಗೌರವ ತಂದು ಕೊಡಬೇಕಾಗಿದೆ. ನನ್ನ ಗೆಲುವು ಗ್ರಾಮ ಪಂಚಾಯಿತಿಗಳ ಮತ್ತು ಅದರ ಸದಸ್ಯರ ಗೆಲುವಾಗಲಿದೆ’ ಎಂದು ಸ್ಪರ್ಧೆಗೆ ಕಾರಣ ನೀಡಿದರು.

‘ವಿಧಾನ ಪರಿಷತ್ತಿಗೆ ಚಿನ್ನ-ಬೆಳ್ಳಿ
ವರ್ತಕರು, ರಿಯಲ್ ಎಸ್ಟೇಟ್ ವ್ಯಾಪಾರಿ
ಗಳು ಬೇಕಾಗಿಲ್ಲ. ಸಮರ್ಥರು, ಹೋರಾಟ
ಗಾರರು, ಶಕ್ತಿವಂತರು ಬೇಕಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಅವರಿಗೆ
ಶಕ್ತಿ ತುಂಬುವ ಅಭ್ಯರ್ಥಿಗಳನ್ನು
ಆಯ್ಕೆ ಮಾಡಬೇಕು. ನಾನು ಗ್ರಾಮಪಂಚಾಯಿತಿಗಳ ಸದಸ್ಯರ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಿಗೆ ಕನಿಷ್ಠ  5 ಸಾವಿರ ಮಾಸಿಕ ವೇತನ, ಉಪಾಧ್ಯಕ್ಷರಿಗೆ   7,500 ಮತ್ತು ಅಧ್ಯಕ್ಷರಿಗೆ ಕನಿಷ್ಠ  10 ಸಾವಿರ ಮಾಸಿಕ ವೇತನ ಕೊಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.////

📱 Read Top News, Belgaum News Updates, Belagavi News in Kannada, Latest News on News Belgaum