Belagavi News In Kannada | News Belgaum

ರೈಲುಗಳ ವಿಶೇಷ ದರ ಕಡಿತಗೊಳಿಸಿದ ರೈಲ್ವೆ ಇಲಾಖೆ

🌐 Belgaum News :

ಬೆಂಗಳೂರು: ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೊರೊನಾ ಕಾಲದಲ್ಲಿ ಸಂಚರಿಸುತ್ತಿದ್ದ ರೈಲುಗಳ ದರ ಏರಿಕೆ ಮಾಡಿದ್ದ ರೈಲ್ವೇ ಇಲಾಖೆ, ವಿಶೇಷ ದರ ಕಡಿತಗೊಳಿಸಿ, ಕೊರೊನಾ ಮೊದಲು ಇದ್ದ ದರ ನಿಗದಿಗೆ ನಿರ್ಧರಿಸಿದೆ.

ರೈಲುಗಳ ವಿಶೇಷ ದರ ಕಡಿಗೊಳಿಸುವಂತೆ ರೈಲ್ವೆ ಮಂಡಳಿ ನವೆಂಬರ್ 12 ರಂದು ದೇಶದ ಎಲ್ಲ ರೈಲ್ವೆ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ. ಕೊರೊನಾ ವೇಳೆ ಕೆಲ ರೈಲುಗಳಿಗೆ ನೀಡಲಾಗಿದ್ದ ವಿಶೇಷ ದರ್ಜೆಯನ್ನು ಹಿಂಪಡೆದು ಮೊದಲಿನ ದರ ನಿಗದಿ ಮಾಡಲು ಸೂಚನೆ ನೀಡಿದ್ದು, ನವೆಂಬರ್ 18 ರಿಂದ ಹಳೆ ದರ ಜಾರಿಗೆ ಬರಲಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum