Belagavi News In Kannada | News Belgaum

ಚರಂಡಿ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ: ಅಧಿಕಾರಿಗಳಿಗೆ ಛೀ ಮಾರಿ ಹಾಕಿದ ನಿವಾಸಿಗಳು

🌐 Belgaum News :

ಬೆಂಗಳೂರು:  ಚರಂಡಿ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನ ಟೆಲಿಕಾಂ ಬಡಾವಣೆಯಲ್ಲಿ ನಡೆದಿದೆ.

 

ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿದ್ದು,   ಇದನ್ನು ಅರಿಯದೇ ನೀರು ಸೇವನೆ ಮಾಡಿದ ಜನರು ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ.   ಸದ್ಯ 20ಕ್ಕೂ ಹೆಚ್ಚು ಜನರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.   ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಅಸ್ವಸ್ಥವಾಗಿರುವವರು ಕಲುಷಿತ ನೀರು ಸೇವಿಸಿರುವುದು ದೃಢವಾಗಿದೆ. ಪ್ರಾಣಾಪಾಯದಿಂದ ಪಾರಾದವರ ಕುಟುಂಬಸ್ಥರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಮ್ಮ ಮನೆಗೆ ಪ್ಯೂರ್ ನೀರು ಪೂರೈಕೆ ಮಾಡಿಕೊಳ್ಳುತ್ತಾರೆ. ಆದರೆ, ಜನಸಾಮಾನ್ಯರಿಗೆ ಚರಂಡಿ ಪೂರೈಕೆ ಮಾಡುತ್ತಾರೆ, ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ? ಎಂದು ಕಿಡಿಕಾರಿದ್ದಾರೆ.  ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum