Belagavi News In Kannada | News Belgaum

ಅಖಿಲ ಕರ್ನಾಟಕ ಮಹಾಪ್ರಸಾದಿ ಶರಣ ಡೋಹರ ಕಕ್ಕಯ್ಯ ಸೇವಾ ಸಂಸ್ಥೆಯ ಉದ್ಘಾಟನೆ

🌐 Belgaum News :

 

ಬೆಳಗಾವಿ, ನ.15- ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ

 

ಎಂಬ ಬಸವಣ್ಣನವರ ವಚನ ಸಾರುವಂತೆ ಡೋಹರ ಕಕ್ಕಯ್ಯ ಸಮಾಜದ ಸರ್ವ ಸಮಾಜ ಬಾಂಧವರಿಗೆ ಒಂದೇ ವೇದಿಕೆ ಅಡಿಯಲ್ಲಿ ಅಹ್ವಾನಿಸಿ ಎಲ್ಲರ ವಿಶ್ವಾಸ ಬೆಂಬಲದೊಂದಿಗೆ ದಿನಾಂಕ 14/11/ 2021ರಂದು ಬೆಳಗಾವಿಯ ಆನಂದವಾಡಿ ವಿಠ್ಠಲ ಹರಿ ಮಂದಿರದಲ್ಲಿ, ಪೂಜ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ನಿಶ್ಚಲ ಸ್ವರೂಪ ಗುರೂಜಿ ಬೆಳಗಾವಿ ಇವರ ಅಮೃತ ಹಸ್ತದಿಂದ ಸಂಸ್ಥೆಯ ಉದ್ಘಾಟನೆಯನ್ನು ಅತಿ ವಿಜೃಂಭಣೆಯಿಂದ ಮಾಡಲಾಯಿತು.

 

ಈ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷರಾಗಿ ಗೌರವಾನ್ವಿತ ಉದ್ಯೋಗಪತಿಗಳಾದ ಅರವಿಂದ್ ಬಸ್ಸಪ್ಪ ಘೋಡಕೆ ಹಾಗೂ ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಡೋಹರ ಕಕ್ಕಯ್ಯ ಮಂಡಳದ ಅಧ್ಯಕ್ಷರಾದ ಲಕ್ಷ್ಮಿಕಾಂತ್ ಹುಟಗಿಕರ್, ಮತ್ತು ನೂತನ ಸಂಸ್ಥೆಯಾದ ಅಖಿಲ ಕರ್ನಾಟಕ ಮಹಾಪ್ರಸಾದಿ ಶರಣ ಡೋಹರ ಕಕ್ಕಯ್ಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಮಹಾದೇವ ಪೆÇೀಳ, ಸುರೇಶ ಶೇರಖಾನೆ ಬೆಂಗಳೂರು, ಶಿವಪುತ್ರ ಟಿ ಪೆÇೀಳ ವಿಜಯಪುರ, ಮನೋಹರ್ ಎಸ್ ಕದಂ ಬಾಗಲಕೋಟ್, ಯುವ ನಾಯಕರಾದ ವಿನಾಯಕ್ ಅರವಿಂದ್ ಘೋಡಕೆ, ನಿರ್ದೇಶಕರಾದ ಅನಿಲ ಹುಟಗಿ ಹಾಗೂ ಸೇವಾ ಸಂಸ್ಥೆಯ ಎಲ್ಲ ಕಾರ್ಯಕಾರಣಿ ಪದಾಧಿಕಾರಿಗಳು ಸದಸ್ಯರು ಅಖಿಲ ಭಾರತೀಯ ಡೋಹರ ಕಕ್ಕಯ್ಯ ಮಂಡಳದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು ಸಂಸ್ಥೆಯ ಕಾರ್ಯಕಲಾಪಗಳಿಗೆ ಚಾಲನೆ ನೀಡಲಾಯಿತು.

📱 Read Top News, Belgaum News Updates, Belagavi News in Kannada, Latest News on News Belgaum