Belagavi News In Kannada | News Belgaum

ಜಾನಪದ’ ನಗರಕ್ಕೂ ಸಂಬಂಧಿಸಿದೆ: ಡಾ. ಸಿ.ಕೆ.ನಾವಲಗಿ

🌐 Belgaum News :

ಗೋಕಾಕ: ಜಾನಪದ ಅನಕ್ಷರಸ್ಥ ಹಳ್ಳಿಗರದು ಮಾತ್ರವಲ್ಲ, ಅಕ್ಷರಸ್ಥ ನಗರದವರಿಗೂ ಸಂಬಂಧಿಸಿದ್ದೆಂದು ಜಾನಪದ ಚಿಂತಕ ಡಾ. ಸಿ.ಕೆ.ನಾವಲಗಿ ಅಭಿಪ್ರಾಯಪಟ್ಟರು.

ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಿಂದ  ಇಂದು ಆಯೋಜಿಸಿಲಾಗಿದ್ದ, 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ‘ಜಾನಪದ ಸಾಹಿತ್ಯ’ ಕುರಿತು ಮಾತನಾಡುತ್ತ, ಹಳ್ಳಿಗಳಲ್ಲಿ ನಗರದ ಕನಸು ಇದೆ. ನಗರಗಳಲ್ಲಿ ಹಳ್ಳಿಯ ಅಂತಃಸತ್ವವಿದೆ. ಜಾನಪದ ಈಗಲೂ ಹುಟ್ಟುತ್ತಲಿದೆ. ನಗರ ಜಾನಪದ, ಆಧುನಿಕ ಜಾನಪದ ತುಂಬ ಬೆಳೆಯುತ್ತಲಿದೆ. ಇಂದು ಜಾನಪದದ ಪರಿಕಲ್ಪನೆಯೇ ಬೇರೆಯಾಗುತ್ತಿದೆ.

ಇದು ಜಾನಪದ ಸತ್ವ-ಶಕ್ತಿ ಮತ್ತು ನಿರಂತರತೆಯ ಪ್ರತೀಕವೆಂದರು. ಜಾನಪದದ ಮೂಲ ಬೇರಿನಿಂದ ಬೆಳೆದ ಕನ್ನಡ ಸಾಹಿತ್ಯ-ಭಾಷೆ ಇಂದು ಭಾರತೀಯ ಭಾಷೆಗಳಲ್ಲಿಯೇ ಉತ್ಕಂಷ್ಟ ಸ್ಥಾನ ಪಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿಕೊಂಡ ಮುಖ್ಯೋಪಾಧ್ಯಾಪಕಿ ಚೇತನಾ ಪಾಗಾದ ಮಾತನಾಡುತ್ತ ಆಂಗ್ಲಭಾಷೆಯೊಂದಿಗೆ, ಕನ್ನಡಭಾಷೆ-ಸಂಸ್ಕøತಿಯನ್ನು ತುಂಬ ಪ್ರೀತಿ-ಹೆಮ್ಮೆಯಿಂದ ನಮ್ಮ ಮಕ್ಕಳು ಕಲಿಯುತ್ತಿದ್ದಾರೆಂದರು.

ಡಾ. ಸಿ.ಕೆ. ನಾವಲಗಿ ಮತ್ತು ವಿನೂತಾ ನಾವಲಗಿ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು-ಹಿರಿಯ ಶಿಕ್ಷಕರು ಸೇರಿ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಸಾಹಿತಿಗಳ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿದರು.  ವಣ್ಣೂರ, ವಾಳ್ವೇಕರ ಮುಂತಾದವರು ಉಪಸ್ಥಿತರಿದ್ದರು.
ಎಸ್.ಎ. ಹರಕುಣಿ ಸ್ವಾಗತಿಸಿದರು.  ಬಿ.ಜಿ.ಪಾಟೀಲ ಪರಿಚಯಿಸಿದರು, ಪಿ.ಆರ್.ತಾಂವಶಿ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಕೆ.ಬಿ. ಪಾಟೀಲ ವಂದಿಸಿದರು.////

📱 Read Top News, Belgaum News Updates, Belagavi News in Kannada, Latest News on News Belgaum