Belagavi News In Kannada | News Belgaum

ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ: ನಟ ವಿಶಾಲ್‌

🌐 Belgaum News :

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರು ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಮೊದಲೇ ಹೇಳಿದ್ದೆ. ಆ ಮಾತನ್ನು ಉಳಿಸಿಕೊಳ್ಳುತ್ತೇನೆ. ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ತಮಿಳು ನಟ ವಿಶಾಲ್‌ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪುನೀತ್‌ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ನಮ್ಮನ್ನು ಆಗಲಿದ್ದು ಬೇಸರ ತರಿಸಿದೆ. ಪುನೀತ್ ನನ್ನ ಮಿತ್ರ, ಅವರು ಒಳ್ಳೆ ಮನುಷ್ಯ. ನನಗೆ ಪುನೀತ್ ದೊಡ್ಡ ಅಣ್ಣನಂತೆ. ಅವರು ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತಾಗಿದೆ ಎಂದರು.

ಪುನೀತ್ ನನ್ನೊಂದಿಗೆ ಸದಾ ಒಳ್ಳೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಪುನೀತ್ ತಾವು ಮಾಡಿದ ಕೆಲಸವನ್ನು ಯಾರಿಗೂ ಹೇಳಲು ಇಷ್ಟಪಡುತ್ತಿರಲಿಲ್ಲ. ಅವರ ಮಾನವೀಯ ಗುಣ, ಕೆಲಸ ಎಲ್ಲರೂ ಮೆಚ್ವುವಂತದ್ದು. ಅವರ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಅವರ ಕೆಲಸಗಳನ್ನು ಭಾರತೀಯ ಚಿತ್ರರಂಗ ಸಾವಿರ ವರ್ಷ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಪುನೀತ್‌ ಅವರು ಓದಿಸುತ್ತಿದ್ದ ಮಕ್ಕಳ ಜವಾಬ್ದಾರಿ ಇದೆ. ನಾನು ಈಗಾಗಲೇ ಅವರು ಜವಬ್ದಾರಿ ವಹಿಸಿದ್ದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಹೊಣೆ ವಹಿಸಿಕೊಂಡಿರುವ ಬಗ್ಗೆ ಹೇಳಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.////

📱 Read Top News, Belgaum News Updates, Belagavi News in Kannada, Latest News on News Belgaum