Belagavi News In Kannada | News Belgaum

ವಿಶ್ವವಿದ್ಯಾಲಯದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನೆ

🌐 Belgaum News :

ವಿಶ್ವವಿದ್ಯಾಲಯದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನೆ
ರಾಣಿಚನ್ನಮ್ಮ ವಿಶ್ವವಿದ್ಯಾಲಯವುಉನ್ನತ ಹುದ್ದೆಗಳಿಗೆ ಹೋಗುವ ಪ್ರಾಧ್ಯಾಪಕರುಗಳಿಗೆ ಗರಡಿಮನೆಯಿದ್ದಂತೆ. ಇಲ್ಲಿ ಸಿದ್ದಗೊಂಡ ವ್ಯಕ್ತಿತ್ವಗಳು ರಾಜ್ಯದಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ರಾಣಿಚನ್ನಮ್ಮ ವಿಶ್ವವಿದ್ಯಾಲಯವು  ಆರಂಭದಿಂದಲೂ   ಪ್ರಯೋಗಶೀಲವಾಗಿದ್ದು, ನಾಡಿನ ಶೈಕ್ಷಣಿಕ  ಅಶೋತ್ತರಗಳನ್ನು ಈಡೇರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಹಾಗೂ ಇತ್ತೀಚಿಗೆ ವಿಶ್ವವಿದ್ಯಾಲಯವು ನ್ಯಾಕ್‍ಗ್ರೇಡ್‍ನಲ್ಲಿಉನ್ನತ ಶ್ರೇಣಿಯನ್ನು ಪಡೆದಿರುವುದುಅಭಿನಂದನೀಯ ಸಂಗತಿಯೆಂದು ವಿಧಾನ ಪರಿಷತ್ತಿನ ಸದಸ್ಯರಾದ ಪ್ರೊ. ತಳವಾರ ಸಾಬಣ್ಣಇವರುಅಭಿಪ್ರಾಯಪಟ್ಟರು. ಅವರುರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಕರ ಸಂಘವು ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ದಿನಾಂಕ: 16-11-2021 ರಂದು ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ. ಆಲಗೂರಅವರು ಮಾತನಾಡಿರಾಣಿಚನ್ನಮ್ಮ ವಿಶ್ವವಿದ್ಯಾಲಯದಅನುಭವವು ಅನಿರ್ವಚನೀಯಎಂದುಅಭಿಪ್ರಾಯಪಟ್ಟರು.

 

ಗದಗಿನಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿಷ್ಣುಕಾಂತಚಟಪಲ್ಲಿಅವರುರಾಣಿಚನ್ನಮ್ಮ ವಿಶ್ವವಿದ್ಯಾಲಯವುಉತ್ತರಕರ್ನಾಟಕದ ಮಹತ್ವದ ವಿಶ್ವವಿದ್ಯಾಲಯವಾಗಿದ್ದುಉನ್ನತ ಶಿಕ್ಷಣದಲ್ಲಿ ದಾಪುಗಾಲಿಡುತ್ತಿರುವ ವಿಶ್ವವಿದ್ಯಾಲಯವಾಗಿದೆಎಂದರು. ಸನ್ಮಾನಿತರಾದ ಪ್ರೊ. ದಶರಥ ಅಲಬಾಳ ಅವರು ಮೂರು ದಶಕಗಳ ಪರ್ಯಂತ ಬೋಧನಾನುಭವವು ನನಗೆ ತೃಪ್ತಿಯನ್ನುತಂದುಕೊಟ್ಟಿದೆಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡಅವರು ವಿಶ್ವವಿದ್ಯಾಲಯದಲ್ಲಿಅಭಿವೃದ್ಧಿಯ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ವಿಶ್ವವಿದ್ಯಾಲಯದ ಹೊಸ ನಿವೇಶನದಲ್ಲಿ ಕಟ್ಟಡಗಳ ಕಾಮಗಾರಿಗೆಟೆಂಡರ್ ಪ್ರಕ್ರಿಯೆಯುಅಂತಿಮಹಂತದಲ್ಲಿದೆಎಂದು ತಿಳಿಸಿದರು.

 

ಸಾಧ್ಯವಾದಷ್ಟು ಬೇಗ ಹೊಸ ಕಟ್ಟಡಗಳನ್ನು ಹೊಂದುವುದಾಗಿ ಭರವಸೆ ನೀಡಿದರು. ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಅವರುರಾಣಿಚನ್ನಮ್ಮ ವಿಶ್ವವಿದ್ಯಾಲಯದಿಂದಉನ್ನತ ಹುದ್ದೆಗೆ ಹೋದ ಹಿರಿಯರು ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಲಹೆ-ಸೂಚನೆಗಳನ್ನು ನೀಡುತ್ತಿರಬೇಕೆಂದು ವಿನಂತಿಸಿಕೊಂಡರು. ಸ್ನಾತಕೋತ್ತರ ಶಿಕ್ಷಕರ ಸಂಘದಅಧ್ಯಕ್ಷರಾದ ಪ್ರೊ. ಡಿ.ಎನ್.ಪಾಟೀಲರು ಮಾತನಾಡಿ ವಿಶ್ರಾಂತ ಬದುಕಿಗೆ ಪಾದಾರ್ಪಣೆ ಮಾಡಿದ ಹಿರಿಯ ಪ್ರಾಧ್ಯಾಪಕರನ್ನು ಹಾಗೂ ಅವರ ಸೇವೆಯನ್ನು ಸ್ಮರಿಸಿಕೊಂಡರು.

 

ಈ ಸಂದರ್ಭದಲ್ಲಿ ಕುಲಸಚಿವರು (ಮೌಲ್ಯಮಾಪನ)ರಾದ ಪ್ರೊ. ಎಸ್.ಎಂ.ಹುರಕಡ್ಲಿಅವರು ಉಪಸ್ಥಿತರಿದ್ದರು. ಸ್ನಾತಕೋತ್ತರ ಶಿಕ್ಷಕರ ಸಂಘದ ಕಾರ್ಯದರ್ಶಿಯಾದ ಪ್ರೊ. ಅಶೋಕ ಡಿಸೋಜಾಅವರು ವಂದನೆಗಳನ್ನು ಸಲ್ಲಿಸಿದರು. ಉಪಾಧ್ಯಕ್ಷರಾದ ಪ್ರೊ. ವಿಜಯಲಕ್ಷ್ಮೀ ಶೀಗೇಹಳ್ಳಿ ಅವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರೊ. ಸಿ.ಎನ್.ವಾಘಮಾರೆ, ಪ್ರೊ. ಕೆ. ಕಾಂತರಾಜು, ಡಾ. ಎ.ಎನ್.ಕರಿಬಸನಗೌಡ್ರ, ಡಾ.ಮಂಜುಳಾ ಜಿ.ಕೆ. ಮುಂತಾದವರು ಹಾಜರಿದ್ದರು. ಸಭೆಯಲ್ಲಿ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭೆಯಲ್ಲಿಡಾ.ಡಿ.ಆರ್.ಅಲಬಾಳ, ಪ್ರೊ. ವಿಷ್ಣುಕಾಂತಚಟಪಲ್ಲಿ, ಪ್ರೊ. ಸಿದ್ದು ಪಿ ಆಲಗೂರ, ಪ್ರೊ. ತಳವಾರ ಸಾಬಣ್ಣಇವರನ್ನು ಸನ್ಮಾನಿಸಲಾಯಿತು.

📱 Read Top News, Belgaum News Updates, Belagavi News in Kannada, Latest News on News Belgaum