Belagavi News In Kannada | News Belgaum

ಕಾಂಗ್ರೆಸ್ ಸೇವಾದಳಕ್ಕೆ ಬಲ ತುಂಬುವ ಕೆಲಸವಾಗಲಿ: ಸೇವಾದಳ ರಾಜ್ಯಾಧ್ಯಕ್ಷ ರಾಮಚಂದ್ರ

🌐 Belgaum News :

ಬೆಳಗಾವಿ:  ” ಪ್ರಜಾಪ್ರಭುತ್ವದ  ದುರುಪಯೋಗ ಮಾಡುವ ಶಕ್ತಿ ದೇಶದಲ್ಲಿ ಬೆಳೆಯುತ್ತಿದೆ.   ಅವುಗಳ ವಿರುದ್ದ ಹೋರಾಡುವ ಕೆಲಸವಾಗಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಸೇವಾದಳಕ್ಕೆ  ಬಲ ತುಂಬುವ ಕಾರ್ಯವಾಗಬೇಕು ”  ಎಂದು  ಸೇವಾದಳ ರಾಜ್ಯಾಧ್ಯಕ್ಷ ರಾಮಚಂದ್ರ  ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನಕ್ಕೆ  ಆಗಮಿಸಿ, ಕಾಂಗ್ರೆಸ್ ಹಾಗೂ ಸೇವಾದಳದ ಮುಖಂಡರ ಜತೆ ಸಮಾಲೋಚನೆ ನಡೆಸಿ,    ಮಾಧ್ಯಮದವರೊಂದಿಗೆ  ಅವರು ಮಾತನಾಡಿ, ಸೇವಾ ದಳದ  ರಾಜ್ಯಾಧ್ಯಕ್ಷರಾದ ಬಳಿಕ   ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಲಾಗಿದೆ.     ಸೇವಾದಳ ಎಂದರೆ ಅದು ಶಿಸ್ತಿನ ಸಂಘಟನೆ. ಈ ಸಂಘಟನೆಯನ್ನು ದೇಶದಲ್ಲಿ ಹೆಮ್ಮರವಾಗಲಿ ಬೆಳೆಸುವ ಪ್ರಯತ್ನ ನಾವು ಮಾಡಬೇಕಾಗಿದೆ.

ಶಿಸ್ತು ಮತ್ತು ಕಾಂಗ್ರೆಸ್ ಪಕ್ಷ ಎರಡೂ ಜೊತೆಯಾದರೆ ಇವೆಲ್ಲವೂ ಸಾಧ್ಯ.  ವಿನಯ್ ನಾವಲಗಟ್ಟಿ ಜಿಲ್ಲಾಧ್ಯಕ್ಷರಾಗಲು  ಸೇವಾದಳ ಸಹಕಾರ ನೀಡಿದೆ, ಇಲ್ಲಿ ಉತ್ತಮ ಸೇವೆ ಸಲ್ಲಿಸಿದ ಬಳಿಕ ಅವರು ಉನ್ನತ್ತ ಸ್ಥಾನದಲ್ಲಿದ್ದಾರೆ  ಎಂದರು.

ಪ್ರಜಾಪ್ರಭುತ್ವ ವಿರೋಧಿ ಶಕ್ತಿ ವಿರುದ್ಧ ಹೋರಾಡಲು ಸೇವಾದಳ  ಅವಶ್ಯ:  ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್ ಸೇವಾದಳ  ಇದೆ.  ದೇಶದಲ್ಲಿ  ಈಗ್  ಪ್ರಜಾಪ್ರಭುತ್ವ ವಿರೋಧಿ ಶಕ್ತಿ ಬೆಳೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲು ಸೇವಾದಳವನ್ನು ಬಲಪಡಿಸುತ್ತಿದ್ದೇವೆ ಎಂದರು.  ಸಧ್ಯ ವಿಧಾನಪರಿಷತ್ ಚುನಾವಣೆ ಇದೆ, ಅಭ್ಯರ್ಥಿಗಳ ಆಯ್ಕೆ ಅಧ್ಯಕ್ಷರಿಗೆ ಬಿಟ್ಟಿದ್ದು, ಸತೀಶ ಜಾರಕಿಹೊಳಿ ಅವರು ಸೇರಿದಂತೆ ಇಲ್ಲಿನ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ  ಅಧಿಕಾರಿಕ್ಕೆ ತರುತ್ತೆವೆ ಎಂದು  ರಾಮಚಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸೇವಾದಳದ ರಾಜ್ಯ ಉಸ್ತುವಾರಿ ಬಲರಾಮ್ ಸಿಂಗ್ ಬಡೂರಿಯಾ, ರಾಜ್ಯ ಕಾರ್ಯಾಧ್ಯಕ್ಷ ವಿಠಲ್ ತುಳಸಿಗೇರಿ,  ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಸೇವಾದಳದ ಪದಾಧಿಕಾರಿ ಸುಜಾತಾ ಉಲ್ಲಾಳ, ಸರೋಜಾ ಹೂಗಾರ, ಮಲ್ಲೇಶ ಚೌಗುಲೆ, ರಾಜು ಶಿಂಗೆ,  ಮಂಜುನಾಥ ಕಾಂಬಳೆ,  ದೀಪಕ್ ಸೇಠ್, ಅಬ್ದುಲ್ ಸಮ್ಮದ್ ಹಾಗೂ ಇತರರು ಇದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum